‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಪಾಸ್​ ಇಲ್ಲದವರಿಗೆ ನೋ ಎಂಟ್ರಿ; ಪೊಲೀಸರು ಕೊಟ್ಟ​ ವಾರ್ನಿಂಗ್​ ಏನು?

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಪಾಸ್​ ಇಲ್ಲದವರಿಗೆ ನೋ ಎಂಟ್ರಿ; ಪೊಲೀಸರು ಕೊಟ್ಟ​ ವಾರ್ನಿಂಗ್​ ಏನು?

TV9 Web
| Updated By: ಮದನ್​ ಕುಮಾರ್​

Updated on: Nov 15, 2021 | 3:24 PM

Puneeth Namana: ಪಾಸ್​ ಇಲ್ಲದವರು ‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಬರುವಂತಿಲ್ಲ ಎಂದು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ. ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ನಮನ ಸಲ್ಲಿಸಲು ಚಿತ್ರರಂಗದ ವತಿಯಿಂದ ‘ಪುನೀತ್​ ನಮನ’ ( Puneeth Namana) ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ (ನ.16) ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಇದಕ್ಕೆ ಅಭಿಮಾನಿಗಳಿಗೆ ಪ್ರವೇಶ ಇಲ್ಲ. ಕೇವಲ ಸೆಲೆಬ್ರಿಟಿಗಳು ಮಾತ್ರ ಭಾಗವಹಿಸಲಿದ್ದಾರೆ. ವಿವಿಐಪಿ, ವಿಐಪಿ ಸೇರಿದಂತೆ 2 ಸಾವಿರ ಜನರಿಗೆ ಪಾಸ್​ ವಿತರಿಸಲಾಗಿದೆ. ಪಾಸ್​ ಇಲ್ಲದಿರುವವರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ಇಲ್ಲ. ಆ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ (Karnataka Film Chamber) ಪದಾಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿದ್ದಾರೆ.

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಪೊಲೀಸ್​ ಇಲಾಖೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಖಡಕ್​ ಆದೇಶ ಬಂದಿದೆ. ಹಾಗಾಗಿ ತುಂಬ ಕಟ್ಟುನಿಟ್ಟಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಪಾಸ್​ ಇಲ್ಲದವರು ಬರುವಂತಿಲ್ಲ ಎಂದು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: 2 ಸಾವಿರ ಜನರಿಗೆ ಆಹ್ವಾನ; ಗಣ್ಯರಿಗೆ ಪಾಸ್​ ವ್ಯವಸ್ಥೆ

Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?