ತಮಿಳು ನಟರಾದ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ತೆಲುಗು ಕಲಾವಿದರಾದ ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್, ಪ್ರಭಾಸ್, ರಾಮ್ ಚರಣ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗಿ ಆಗುವ ನಿರೀಕ್ಷೆ ಇದೆ. ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಪ್ರಮುಖ ರಾಜಕೀಯ ಮುಖಂಡರ ಸಹ ಭಾಗಿ ಆಗುವ ಸಾಧ್ಯತೆ ಇದೆ. ಮಂಗಳವಾರ (ನ.16) ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ.
ಭಾನುವಾರ (ನ.14) ‘ಭಜರಂಗಿ 2’ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಶಿವರಾಜ್ಕುಮಾರ್ ಅವರು ‘ಪುನೀತ್ ನಮನ’ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು. ‘ಇದು ಸಂಪೂರ್ಣ ಚಿತ್ರರಂಗದಿಂದ ನಡೆಯುತ್ತಿರುವ ಕಾರ್ಯಕ್ರಮ. ಅದರ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ನಮನ ಅನ್ನೋದಕ್ಕೆ ನನಗೆ ಬೇಜಾರು ಆಗುತ್ತದೆ. ಇಂಡಸ್ಟ್ರೀ ಆಸೆ ಪಟ್ಟ ಮೇಲೆ ನಾವೆಲ್ಲರೂ ಹೋಗಬೇಕು. ಯಾಕೆಂದರೆ ನಾವೂ ಈ ಇಂಡಸ್ಟ್ರಿಯಲ್ಲಿ ಇರುವವರು. ಯಾರೆಲ್ಲ ಬರುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬೇರೆಯವರ ಡೇಟ್ಸ್ ಹೇಗಿದೆಯೋ ಗೊತ್ತಿಲ್ಲ. ಯಾರು ಬಂದರೂ ಬಾರದಿದ್ದರೂ ಪುನೀತ್ ಮೇಲೆ ಅವರ ಪ್ರೀತಿ-ವಿಶ್ವಾಸ ಯಾವಾಗಲೂ ಇದ್ದೇ ಇರುತ್ತದೆ’ ಎಂದು ಶಿವಣ್ಣ ಹೇಳಿದ್ದರು.
ಇದನ್ನೂ ಓದಿ:
ಬಸ್ ನಿಲ್ದಾಣದಲ್ಲಿ ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್
ಪುನೀತ್ ನಿಧನದ ಬಳಿಕ ಜಿಮ್ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ