‘ಚಿತ್ರರಂಗಕ್ಕೆ ತೊಂದರೆ ಆಗಿದೆ, ಆದರೆ ಕಾನೂನಿಗೆ ತಲೆ ಬಾಗಲೇ ಬೇಕು’

Darshan Thoogudeepa: ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ಕುರಿತಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

‘ಚಿತ್ರರಂಗಕ್ಕೆ ತೊಂದರೆ ಆಗಿದೆ, ಆದರೆ ಕಾನೂನಿಗೆ ತಲೆ ಬಾಗಲೇ ಬೇಕು’
|

Updated on: Sep 04, 2024 | 7:00 PM

ನಟ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್​ ಶೀಟ್​ನ ಕೆಲವು ಅಂಶಗಳು ಈಗಾಗಲೇ ಬಹಿರಂಗಗೊಂಡಿದ್ದು, ಕಠಿಣವಾದ ಆರೋಪ ಪಟ್ಟಿಯನ್ನೇ ಪೊಲೀಸರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಮಟ್ಟದ ಸಾಕ್ಷ್ಯಗಳು, ಹೇಳಿಕೆಗಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಬೆಳವಣಿಗೆ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್, ‘ದರ್ಶನ್ ಬಂಧನದಿಂದ ಚಿತ್ರರಂಗಕ್ಕೆ ಸಣ್ಣ ಹಿನ್ನಡೆ ಆಗಿರುವುದು ನಿಜ. ಕೆಲವು ಸಿನಿಮಾಗಳು ನಿಂತಿವೆ. ಕೆಲವರಿಗೆ ತೊಂದರೆ ಆಗಿದೆ. ಆದರೆ ಹಾಗೆಂದು ಕಾನೂನನ್ನು ಮೀರಿ ನಡೆಯುವುದು ಸರಿಯಲ್ಲ. ಒಂದೊಮ್ಮೆ ದರ್ಶನ್ ತಪ್ಪು ಮಾಡಿದ್ದರೆ ಕಾನೂನಿಗೆ ತಲೆ ಬಾಗಲೇ ಬೇಕು. ಅವರು ತಪ್ಪು ಮಾಡಿದ್ದರೆ ಶಿಕ್ಷೆಯನ್ನು ಅನುಭವಿಸಲೇ ಬೇಕಾಗುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us