ಎಸ್ ಎಮ್ ಕೃಷ್ಣ ಅವರಿಗೆ ದಸರಾ ಉತ್ಸವ ಉದ್ಘಾಟಿಸಲು ಅಧಿಕೃತವಾಗಿ ಆಮಂತ್ರಣ ನೀಡಿದ ಕರ್ನಾಟಕ ಸರ್ಕಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 02, 2021 | 10:32 PM

ಕೃಷ್ಣ ಅವರಿಗೆ ಅಧಿಕೃತವಾಗಿ ಆಮಂತ್ರಣ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದ ಕೆಲ ಸಹೋದ್ಯೋಗಿಗಳು ಹಾಗೂ ಇನ್ನಿತರ ಗಣ್ಯರೊಂದಿಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಗೆ ತೆರಳಿದ್ದರು

ಕರ್ನಾಟಕ ಸರ್ಕಾರ ಈ ಬಾರಿಯ ದಸರಾ ಉತ್ಸವvನ್ನು ಉದ್ಘಾಟಿಸಲು ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಿದೆ. ಕೃಷ್ಣ ಅವರಿಗೆ ಅಧಿಕೃತವಾಗಿ ಆಮಂತ್ರಣ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದ ಕೆಲ ಸಹೋದ್ಯೋಗಿಗಳು ಹಾಗೂ ಇನ್ನಿತರ ಗಣ್ಯರೊಂದಿಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಗೆ ತೆರಳಿದ್ದರು. ಬೊಮ್ಮಾಯಿ ಅವರೊಂದಿಗೆ ಕಂದಾಯ ಸಚಿವ ಅರ್ ಆಶೋಕ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ, ಮೈಸೂರಿನ ಮೇಯರ್ ಸುನಂದಾ ಪಳನೇತ್ರ, ಮೈಸೂರಿನ ಸಂಸದ ಪ್ರತಾಪ್ ಸಿಂಹ ಮತ್ತು ಕೆಲ ಅಧಿಕಾರಿಗಳಿದ್ದರು.

ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳಿಗೆ ಆಮಂತ್ರಣ ನೀಡುವ ಮೊದಲೇ ಅವರು ಹೂವಿನ ಹಾರ ಹಾಕಿ ಸ್ವಾಗತಿಸಿದ್ದು ಗಮನ ಸೆಳೆಯಿತು. ಹಾರ ತುರಾಯಿಗಳ ಸನ್ಮಾನ ತಮಗೆ ಬೇಡ ಅಂತ ಬೊಮ್ಮಾಯಿ ಅವರು ಹೇಳಿದ್ದು ಕೃಷ್ಣ ಅವರ ಗಮನಕ್ಕೆ ಬಂದಂತಿಲ್ಲ.

ಸರಿ ಬಿಡಿ ವಿಷಯ ಅದಲ್ಲ. ಬೊಮ್ಮಾಯಿ ಅವರು ಕೃಷ್ಣ ಆವರಿಗೆ ಮೊದಲು ಹಾರ ಹಾಕಿ ನಂತರ ಅವರ ಪೇಟ ತೊಡಿಸಲು ಮುಂದಾದರು. ಪೇಟ ಮಾಜಿ ಮುಖ್ಯಮಂತ್ರಿಗಳ ತಲೆಗೆ ಸರಿಹೊಂದುವಂತಿರಲಿಲ್ಲ. ನಂತರ ಖುದ್ದು ಅವರೇ ಅದನ್ನು ಕೊಂಚ ಸಡಿಲ ಮಾಡಿಕೊಂಡು ತಮ್ಮ ತಲೆ ಮೇಲೆ ಇಟ್ಟುಕೊಂಡರು. ಅಮೇಲೆ ಬೊಮ್ಮಾಯಿ ಅವರು ಅಮಂತ್ರಣ ಪತ್ರಿಕೆಯನ್ನು ಶ್ರೀಯುತರ ಕೈಗಿತ್ತರು.

ಅದಾದ ಬಳಿಕ ಅಶೋಕ, ಸೋಮಶೇಖರ ಮತ್ತು ಪ್ರತಾಪ ಸಿಂಹ ಮೊದಲಾದವರು ಕೃಷ್ಣ ಅವರಿಗೆ ಬೊಕೆಗಳನ್ನು ನೀಡಿ ಅಭಿನಂದಿಸಿದರು.

ಇದನ್ನೂ ಓದಿ:  ಜಾಗಿಂಗ್ ನೆಪದಲ್ಲಿ ಗರ್ಲ್​ ಫ್ರೆಂಡ್​ ಮೀಟ್ ಮಾಡೋಕೆ ಬಂದ ಗಂಡನನ್ನ ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ! ವಿಡಿಯೋ ನೋಡಿ