Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ

Video: ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ

ಮಂಜುನಾಥ ಕೆಬಿ
| Updated By: ನಯನಾ ರಾಜೀವ್

Updated on: Nov 14, 2024 | 9:47 AM

ಏಕಾಏಕಿ ಖ್ಯಾತಿ ಪಡೆಯಬೇಕೆಂದು ರೀಲ್ಸ್​ ಗೀಳಿಗೆ ಬಿದ್ದು ಹಲವರು ತಮ್ಮ ಭವಿಷ್ಯವನ್ನೇ ಕತ್ತಲೆ ಕಡೆಗೆ ನೂಕಿದ್ದಾರೆ. ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾಲೇಜಿನ ಪಕ್ಕದ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ.

ಏಕಾಏಕಿ ಖ್ಯಾತಿ ಪಡೆಯಬೇಕೆಂದು ರೀಲ್ಸ್​ ಗೀಳಿಗೆ ಬಿದ್ದು ಹಲವರು ತಮ್ಮ ಭವಿಷ್ಯವನ್ನೇ ಕತ್ತಲೆ ಕಡೆಗೆ ನೂಕಿದ್ದಾರೆ.
ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾಲೇಜಿನ ಪಕ್ಕದ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ.

ವಿಡಿಯೋವನ್ನು ಲೋಕಕಿರಣ್ ಸ್ನೇಹಿತ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
ವಿದ್ಯಾರ್ಥಿಯು ತನ್ನ ಬೈಕ್​ನಲ್ಲಿದ್ದ ಪೆಟ್ರೋಲ್​ ತೆಗೆದು ಕವರ್​ಗೆ ತುಂಬಿ, ಅದಕ್ಕೆ ಬತ್ತಿ ಹಾಕಿ, ಬೆಂಕಿ ಕೊಟ್ಟಿದ್ದಾರೆ. ಕವರ್ ಸ್ಫೋಟಗೊಳ್ಳುತ್ತಿದ್ದಂತೆ ಸುಮಾರು 10 ಅಡಿ ಎತ್ತರದವರೆಗೂ ಬೆಂಕಿ ಹೊರಹೊಮ್ಮಿತ್ತು. ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಇನ್ಸ್‌ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ