ಆರೋಪಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗಳ ತನಿಖೆ ಯಾವ ಹಂತದಲ್ಲಿದೆ ಅಂತ ಹೇಳಲು ತಡವರಿಸಿದರು ಗೃಹ ಸಚಿವ ಅರಗ ಜ್ಞಾನೇಂದ್ರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 20, 2022 | 8:01 PM

ಪ್ರಕರಣ ಪ್ರಗತಿ ಬಗ್ಗೆ ಕೇಳಿದಾಗ ಸಚಿವರು ವರದಿಗಳನ್ನು ಇನ್ನೂ ನೋಡಿಲ್ಲ ತರಿಸಿಕೊಂಡು ನೋಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಮಾಧ್ಯಮದವರು ಕೇಳಿದ ಮತ್ತೂ ಬೇರೆ ಪ್ರಶ್ನೆಗಳಿಗೆ ಜ್ಞಾನೇಂದ್ರ ಸಮಂಜಸ ಉತ್ತರ ನೀಡಲಿಲ್ಲ.

ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ತಡೆಯಲು ವಿಫಲರಾಗಿ ವ್ಯಾಪಕ ಖಂಡನೆಗೆ ಗುರಿಯಾಗಿರುವ ರಾಜ್ಯದ ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra) ಮಾಧ್ಯಮವರು ಕೇಳುವ ಪ್ರಶ್ನೆಗಳಿಗೆ ಈಗಲೂ ಸರಿಯಾಗಿ ಉತ್ತರಿಸದಷ್ಟು ಒತ್ತಡದಲ್ಲಿದ್ದಾರೆ. ಗುರುವಾರದಂದು ಬೆಂಗಳೂರಲ್ಲಿ ಮಾಧ್ಯಮದವರು ಕೆಲವು ಪೊಲೀಸ್ ಅಧಿಕಾರಿಗಳು ಅಪರಾಧೀ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಸರ್ಕಾರವಾಗಲೀ, ಗೃಹ ಇಲಾಖೆಯಾಗಲೀ (home ministry) ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಕೇಳಿದಾಗ ಉತ್ತರಿಸಲು ಸಚಿವರು ತಡವರಿಸಿದರು. ಸಿಐಡಿ ವಿಭಾಗದಲ್ಲಿ ಎಸ್ ಪಿ ಅಗಿರುವ ಮತ್ತು ಬಹಳ ದಕ್ಷ ಐಪಿಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ರವಿ ಚೆನ್ನಣ್ಣವರ್ (Ravi Channannavar) ಮತ್ತು ಇತರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಲಾಗಿದೆ. ಅಸಲಿಗೆ ಅವರೆಲ್ಲರ ವಿರುದ್ಧ ಪ್ರಕರಣಗಳು ಸಹ ದಾಖಲಾಗಿವೆ. ಮಂಜುನಾಥ ಹೆಸರಿನ ವ್ಯಕ್ತಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಿದ್ದರು. ಅವರ ದೂರಿನಲ್ಲಿ ಚನ್ನಣ್ನವರ್ ಅಲ್ಲದೆ ಹಿಂದೆ ಡಿ ವೈ ಎಸ್ ಆಗಿದ್ದ ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಇಸ್ಮಾಯಿಲ್ ಹೊಸೂರ ಮೊದಲಾದವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಇವರೆಲ್ಲರ ವಿರುದ್ಧ ಇಲಾಖೆ ತೆಗೆದುಕೊಂಡಿರುವ ಕ್ರಮವೇನು? ಸಸ್ಪೆಂಡ್ ಮಾಡಿದರು ತನಿಖೆ ಮುಗಿಯುವ ಮೊದಲೇ ಕೆಲಸಕ್ಕೆ ವಾಪಸಾಗುತ್ತಾರೆ. ಅವರಿಗೆ ಕಾನೂನು ಅನ್ವಯಿಸುವುದಿಲ್ಲವೇ ಅಂತ ಮಾಧ್ಯಮದವರು ಕೇಳಿದಾಗ ಗೊಂದಲಕ್ಕೆ ಬಿದ್ದ ಗೃಹ ಸಚಿವರು, ಒಂದು ಲಕ್ಷಕ್ಕೂ ಹೆಚ್ಚಿರುವ ರಾಜ್ಯದ ಪೊಲೀಸ್ ಸಿಬ್ಬಂದಿ ಪೈಕಿ ಕೆಲವರು ಮಾತ್ರ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಅಂಥವರನ್ನು ಕೇವಲ ಸಸ್ಪೆಂಡ್ ಅಲ್ಲ ಡಿಸ್ಮಿಸ್ ಮಾಡಲಾಗುವುದೆಂದು ಹೇಳಿದರು.

ಪ್ರಕರಣ ಪ್ರಗತಿ ಬಗ್ಗೆ ಕೇಳಿದಾಗ ಸಚಿವರು ವರದಿಗಳನ್ನು ಇನ್ನೂ ನೋಡಿಲ್ಲ ತರಿಸಿಕೊಂಡು ನೋಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಮಾಧ್ಯಮದವರು ಕೇಳಿದ ಮತ್ತೂ ಬೇರೆ ಪ್ರಶ್ನೆಗಳಿಗೆ ಜ್ಞಾನೇಂದ್ರ ಸಮಂಜಸ ಉತ್ತರ ನೀಡಲಿಲ್ಲ.

ಈ ಸಂದರ್ಭದಲ್ಲಿ ಸಚಿವರ ಜೊತೆಗೆ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಇದ್ದಿದ್ದು ಆಶ್ಚರ್ಯ ಮೂಡಿಸಿತು.

ಇದನ್ನೂ ಓದಿ:   Shocking Video: ಗರ್ಭಿಣಿಯಾಗಿದ್ದ ಫಾರೆಸ್ಟ್​ ರೇಂಜರ್​ ಕೂದಲು ಹಿಡಿದೆಳೆದು, ಥಳಿಸಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್