ರೋಗಿಹೊತ್ತ ಅಂಬ್ಯುಲೆನ್ಸ್​ವೊಂದಕ್ಕೆ 31 ಕಿಮೀ ಸೈಡ್ ಬಿಡದ ಕಾರಿನ ಚಾಲಕ ಉದ್ಧಟತನದ ಪ್ರತಾಪ ಮೆರೆದಿದ್ದು ಉಡುಪಿ-ಮೂಲ್ಕಿ ನಡುವೆ!

ಕಾರು ಡ್ರೈವರ್ ವರ್ತನೆಯನ್ನು ಬೇಜವಾಬ್ದಾರಿತನ, ಅಸಡ್ಡೆ, ಉದ್ಧಟತನ, ಪುಂಡಾಟಿಕೆ ಅಂತೆಲ್ಲ ಹೇಳಿದರೆ ಸಾಕಾಗಲಾರದು. ಅವನ ವರ್ತನೆ ಇವೆಲ್ಲ ಪದಗಳನ್ನು ಮೀರಿದ್ದು. ತನ್ನ ಹಿಂದೆ ಅಂಬ್ಯುಲೆನ್ಸ್ ಬರುತ್ತಿರುವುದು ಅವನಿಗೆ ರೇರ್ ಮಿರರ್ ನಲ್ಲಿ ಕಾಣುತ್ತಿದೆ ಮತ್ತು ಸೈರನ್ ಕೂಡ ಕೇಳಿಸುತ್ತಿದೆ.

TV9kannada Web Team

| Edited By: Arun Belly

Jan 20, 2022 | 5:18 PM

ಇಂಥವರೂ ಇರ್ತಾರೆ ನಮ್ಮ ನಡುವೆ. ಇದೇನು ಮೊದಲ ಬಾರಿಗೆ ನಡೆದಿರುವ ಘಟನೆ ಅಲ್ಲ. ಬೆಂಗಳೂರು ಮಹಾನಗರದಲ್ಲಿ ಇಂಥ ದೃಶ್ಯಗಳು ಪ್ರತಿದಿನ ಕಾಣುತ್ತವೆ. ತಮ್ಮ ಹಿಂದೆ ತೀವ್ರ ಸ್ವರೂಪ ಅನಾರೋಗ್ಯದಿಂದ ಬಳುತ್ತಿರುವ ರೋಗಿಯನ್ನು ಹೊತ್ತ ಅಂಬ್ಯುಲೆನ್ಸ್ (Ambulance) ಸೈರನ್ ಬಾರಿಸುತ್ತಾ ಬರುತ್ತಿದ್ದರೂ ಅದು ಮುಂದೆ ದಾರಿ ಬಿಡದ ದ್ವಿಚಕ್ರ ವಾಹನ ಚಾಲಕರು, ಕಾರು ಮತ್ತು ಕ್ಯಾಬ್ ಡ್ರೈವರ್ಗಳು, ಆಟೋ ರಿಕ್ಷಾ ಚಾಲಕರು, ಟ್ರಕ್ ಮತ್ತು ಬಿ ಎಮ್ ಟಿ ಸಿ (BMTC) ಬಸ್ ಚಾಲಕರ ಬೇಜವಾಬ್ದಾರಿ ಮತ್ತು ಉದ್ಧಟತನ ನಾವೆಲ್ಲ ಕಂಡಿದ್ದೇವೆ. ಹಾಗೆ ಮಡುವುದರಿಂದ ಅವರಿಗೆ ಅದೇನು ಆನಂದ ಸಿಗುತ್ತದೋ? ಅದು ವಿಕೃತಾನಾಂದ ಮಾರಾಯ್ರೇ. ಒಬ್ಬ ವ್ಯಕ್ತಿ ಹೃದಯಾಘಾತಕ್ಕೊಳಗಾಗಿದ್ದರೆ, ಅಪಘಾತಕ್ಕೀಡಾಗಿದ್ದರೆ, ಗೋಲ್ಡನ್ ಅವರ್ (Golden Hour) ಅಂತ ಇರುತ್ತೆ, ಅದು ಮುಗಿಯುವುದರೊಳಗೆ ಆಸ್ಪತ್ರೆಗೆ ಸೇರಿಸಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ.

ನಮಗೆ ಮಂಗಳೂರಿನಿಂದ ಒಂದು ವಿಡಿಯೋ ಲಭ್ಯವಾಗಿದೆ. ರೋಗಿಯೊಬ್ಬನನ್ನು ಭಟ್ಕಳಕ್ಕೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ಗೆ KA-19 MD-6843 ನಂಬರ್ ಪ್ಲೇಟ್ ಹೊಂದಿದ್ದ ಕಾರು ಸೈಡ್ ಬಿಡದಿರುವುದನ್ನು ತೋರಿಸುವ ಮೊಬೈಲ್ ಪುಟೇಜ್ ಇದು.

ಕಾರು ಡ್ರೈವರ್ ವರ್ತನೆಯನ್ನು ಬೇಜವಾಬ್ದಾರಿತನ, ಅಸಡ್ಡೆ, ಉದ್ಧಟತನ, ಪುಂಡಾಟಿಕೆ ಅಂತೆಲ್ಲ ಹೇಳಿದರೆ ಸಾಕಾಗಲಾರದು. ಅವನ ವರ್ತನೆ ಇವೆಲ್ಲ ಪದಗಳನ್ನು ಮೀರಿದ್ದು. ತನ್ನ ಹಿಂದೆ ಅಂಬ್ಯುಲೆನ್ಸ್ ಬರುತ್ತಿರುವುದು ಅವನಿಗೆ ರೇರ್ ಮಿರರ್ ನಲ್ಲಿ ಕಾಣುತ್ತಿದೆ ಮತ್ತು ಸೈರನ್ ಕೂಡ ಕೇಳಿಸುತ್ತಿದೆ.

ಸಾಮಾನ್ಯವಾಗಿ ಸಭ್ಯರು, ವಿದ್ಯಾವಂತರು, ತಿಳುವಳಿಕೆ ಇರುವವರು ಅಂಬ್ಯುಲೆನ್ಸ್ ಸೈರನ್ ಶಬ್ದ ಕೇಳಿದ ಕೂಡಲೇ ತಮ್ಮ ವಾಹನದ ಗತಿಯನ್ನ ಕಮ್ಮಿ ಮಾಡಿ ಪಕ್ಕಕ್ಕೆ ಸರಿದು ಅದಕ್ಕೆ ದಾರಿ ಮಾಡಿಕೊಡುತ್ತಾರೆ. ಆದರೆ ಇಲ್ಲಿ ಆಗುತ್ತಿರುವುದು ಸಾಮಾನ್ಯ ನಡುವಳಿಕೆ ಮತ್ತು ತಿಳುವಳಿಕೆಗೆ ತದ್ವಿರುದ್ಧವಾದದ್ದು. ಕಾರಿವನನು ತನ್ನ ಪಾಡಿಗೆ ತಾನು ಓಡುತ್ತಲೇ ಇದ್ದಾನೆ. ಫಾರ್ಮುಲಾ ರೇಸ್ ನಡೆಯುತ್ತಿದೆ ಅಂತ ಆವನು ಭಾವಿಸಿರಬೇಕು!

ಇದನ್ನೂ ಓದಿ:   ಕಳ್ಳತನ ಮಾಡಲು ಹೇಗೆ ಕಿಟಕಿಯಲ್ಲಿ ನುಗ್ಗಿದ್ದೇನೆ ಎಂದು ಪೊಲೀಸರಿಗೆ ಡೆಮೋ ತೋರಿಸಿದ ಕಳ್ಳ; ವಿಡಿಯೋ ವೈರಲ್​

Follow us on

Click on your DTH Provider to Add TV9 Kannada