ಜಿಎಸ್ಟಿ ದರ ಕ್ರಮಬದ್ಧಗೊಳಿಸುವಿಕೆ: ದೆಹಲಿಯಲ್ಲಿ ಬಿಜೆಪಿಯೇತರ ರಾಜ್ಯಸರ್ಕಾರಗಳ ವಿಚಾರ ವಿಮರ್ಶೆ, ಕರ್ನಾಟಕದ ನೇತೃತ್ವ
ಇದು ಹಣಕಾಸು ಸಚಿವರ ಸಭೆಯಾಗಿರುವುದರಿಂದ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಬೇಕಿತ್ತು. ಅದರೆ ಅವರು ಈ ಜವಾಬ್ದಾರಿಯನನ್ನು ಕೃಷ್ಣ ಭೈರೇಗೌಡರ ಹೆಗಲಿಗೆ ಹಾಕಿರುವುದು ಯುವಮಂತ್ರಿಯ ಕ್ಷಮತೆ ಮತ್ತು ಸಾಮರ್ಥ್ಯಗಳ ಮೇಲೆ ಅವರಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಕಂದಾಯ ಸಚಿವರಾಗಿ ಕೃಷ್ಣ ಭೈರೇಗೌಡ ಹಲವಾರು ಸುಧಾರಣೆಗಳನ್ನು ತಂದಿರುವುದು ಕನ್ನಡಿಗರಿಗೆ ಗೊತ್ತಿದೆ.
ದೆಹಲಿ, ಅಗಸ್ಟ್ 29: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋವ್ಸದ ಅಂಗವಾಗಿ ಕೆಂಪುಕೋಟೆಯಿಂದ ಮಾತಾಡುವಾದ ಜಿಎಸ್ಟಿಯಲ್ಲಿ ಹೊಸ ತಲೆಮಾರು ಸುಧಾರಣೆಗಳನ್ನು ಜಾರಿಗೆ ತಂದು ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಭಾರತೀಯರಿಗೆ ದೀಪಾವಳಿಯ ಉಡುಗೊರೆ ನೀಡೋದಾಗಿ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿಂದು ಕರ್ನಾಟಕ ಸರ್ಕಾರದ ಆತಿಥ್ಯದಲ್ಲಿ ಬಿಜೆಪಿಯೇತರ ಆಡಳಿತವಿರುವ 8 ರಾಜ್ಯಗಳ ಹಣಕಾಸ ಸಚಿವರು (finance ministers) ಜಿಎಸ್ಟಿ ದರವನ್ನು ಕ್ರಮಬದ್ಧಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿಚಾರ ವಿಮರ್ಶೆ ನಡೆಸಲು ಸಭೆ ಸೇರಿದ್ದಾರೆ. ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಕೃಷ್ಣ ಭೈರೇಗೌಡ ಲವಲವಿಕೆಯಿಂದ ಓಡಾಡುತ್ತಾ ಬೇರೆ ರಾಜ್ಯಗಳ ಗಣ್ಯರನ್ನು ಸ್ವಾಗತಿಸುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

