ಪುನೀತ್ ರಾಜ್ಕುಮಾರ್ ಹೆಸರಿಗೆ ಮತ್ತೊಂದು ಪ್ರಶಸ್ತಿ
ಪುನೀತ್ ಕರ್ನಾಟಕ ಹಾಲು ಒಕ್ಕೂಟದ ರಾಯಭಾರಿ ಕೂಡ ಆಗಿದ್ದರು. ಈಗ ಕೆಎಂಎಫ್ ಪುನೀತ್ಗೆ ‘ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ’ ಘೋಷಿಸಿದೆ. ವಿಧಾನಸೌಧದಲ್ಲಿ ಸಹಕಾರ ಸಚಿವ ಸೋಮಶೇಖರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಸಾಕಷ್ಟು ಕಂಪನಿ ಹಾಗೂ ಸರ್ಕಾರದ ಸಂಸ್ಥೆಗಳಿಗೆ ರಾಯಭಾರಿ ಆಗಿದ್ದರು. ಅವರು ಕರ್ನಾಟಕ ಹಾಲು ಒಕ್ಕೂಟದ (KMF) ರಾಯಭಾರಿ ಕೂಡ ಆಗಿದ್ದರು. ಈಗ ಕೆಎಂಎಫ್ ಪುನೀತ್ಗೆ ಮರಣೋತ್ತರವಾಗಿ ‘ಸಹಕಾರ ರತ್ನ ಪ್ರಶಸ್ತಿ’ ಘೋಷಿಸಿದೆ. ವಿಧಾನಸೌಧದಲ್ಲಿ ಸಹಕಾರ ಸಚಿವ ಸೋಮಶೇಖರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ಮಾ.20ರಂದು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪುನೀತ್ ರಾಜ್ಕುಮಾರ್ ಕೆಎಂಎಫ್ ರಾಯಭಾರಿಯಾಗಿದ್ದರು. ಹೀಗಾಗಿ ಅವರಿಗೆ ಮರಣೋತ್ತರವಾಗಿ ಸಹಕಾರ ರತ್ನ ಪ್ರಶಸ್ತಿ ನೀಡುತ್ತಿದ್ದೇವೆ’ ಎಂದರು ಅವರು. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಘೋಷಣೆ ಮಾಡಿತ್ತು. ಈ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು
ಇದನ್ನೂ ಓದಿ: ಹೆಲ್ಮೆಟ್ ಜಾಗೃತಿ: ಪುನೀತ್ ರಾಜ್ಕುಮಾರ್ ವಿಡಿಯೋ ನೋಡಿ ಪೊಲೀಸರ ಎದುರು ಅಶ್ವಿನಿ ಭಾವುಕ
‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಇದೆ ಸರ್ಪ್ರೈಸ್; ಏನದು?