ಯೂರಿಯಾ ಬಿಡುಗಡೆಗೆ ನಮ್ಮ ಭಾಗದ ಜನನಾಯಕರು ಕೇಂದ್ರ ಸಚಿವರನ್ನು ಆಗ್ರಹಿಸಬೇಕು: ಡಿಕೆ ಸುರೇಶ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕರೆಯದೆ ಶಾಸಕರೊಂದಿಗೆ ಸಭೆ ನಡೆಸುತ್ತಿರುವುದನ್ನು ಗಮನಕ್ಕೆ ತಂದಾಗ ಸುರೇಶ್, ಹಾಗೇನೂ ಇಲ್ಲ, ಮುಖ್ಯಮಂತ್ರಿಯಾದವರಿಗೆ ಶಾಸಕರ ಜೊತೆ ಸಭೆ ನಡೆಸುವ ಪರಮೋಚ್ಛ ಅಧಿಕಾರ ಇರುತ್ತದೆ, ಹಾಗಾಗೇ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಆಯಾ ಜಿಲ್ಲೆಗಳಲ್ಲಿ ಬರುವ ಕ್ಷೇತ್ರಗಳ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣ: ರಾಜ್ಯದ ರೈತರು ಎದುರಿಸುತ್ತಿರುವ ಯೂರಿಯಾ ಅಭಾವದ (Urea scarcity) ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿಕೆ ಸುರೇಶ್, ಯೂರಿಯಾ ಕರ್ನಾಟಕದಲ್ಲಿ ತಯಾರಾಗಲ್ಲ, ಅದನ್ನು ರಾಜ್ಯಗಳಿಗೆ ಸರಬರಾಜು ಮಾಡಬೇಕಿರುವುದು ಕೇಂದ್ರ ಸರ್ಕಾರ, ರಾಜ್ಯದ ಮುಖ್ಯಮಂತ್ರಿಯವರು ಈಗಾಗಲೇ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ಹೇಳಿದರು. ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಮಂತ್ರಿಗಳೆಲ್ಲ ಅಧಿವೇಶನದಲ್ಲಿ ಸಿಗುತ್ತಾರೆ, ಈ ಭಾಗದ ಜನನಾಯಕರು ಸಂಬಂಧಪಟ್ಟವರನ್ನು ಭೇಟಿಯಾಗಿ ಯೂರಿಯಾ ಬಿಡುಗಡೆಗೆ ಅಗ್ರಹಿಸಬೇಕೆಂದು ಸುರೇಶ್ ಹೇಳಿದರು.
ಇದನ್ನೂ ಓದಿ: ಸರ್ಕಾರೀ ಮತ್ತು ಪಕ್ಷದ ಕಾರ್ಯಗಳ ನಿಮಿತ್ತ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗಲಿದ್ದಾರೆ: ಡಿಕೆ ಸುರೇಶ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
