ಅಗ್ನಿಶಾಮಕ ದಳದ ಮಹಾ ಎಡವಟ್ಟು! ಬೆಂಕಿ ನಂದಿಸಲು ಆಗಮಿಸಿದ್ದ ವಾಹನದಲ್ಲಿಯೇ ನೀರಿಲ್ಲ
ಆದಿ ಉಡುಪಿಯ ಹೋಟೆಲ್ವೊಂದರಲ್ಲಿ ಅಗ್ನಿ ಅವಘಡ ನಡೆದಿತ್ತು. ಕೂಡಲೇ ಹೊಟೇಲ್ ಮಾಲೀಕ, ಬ್ರಹ್ಮಗಿರಿ ಅಗ್ನಿಶಾಮಕದಳ ಸಂಪರ್ಕಿಸಿದ್ದರು. ಅರ್ಧ ಗಂಟೆ ನಂತರ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿತ್ತು. ಇನ್ನೇನು ಬೆಂಕಿ ನಂದಿಸಲು ಮುಂದಾಗ್ತಿದ್ದಂತೆ ಅಗ್ನಿಶಾಮಕ ದಳ ವಾಹನದಲ್ಲಿ ನೀರಿಲ್ಲದಿರುವುದು ಬೆಳಕಿಗೆ ಬಂದಿದೆ. ಇದೀಗ ಅಗ್ನಿಶಾಮಕ ದಳದ ಮಹಾ ಎಡವಟ್ಟಿನ ವೀಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ, ಮೇ.17: ನಗರದ ಆದಿ ಉಡುಪಿ(Udupi)ಯ ಹೋಟೆಲ್ವೊಂದರಲ್ಲಿ ಅಗ್ನಿ ಅವಘಡ ನಡೆದಿತ್ತು. ಕೂಡಲೇ ಹೊಟೇಲ್ ಮಾಲೀಕ, ಬ್ರಹ್ಮಗಿರಿ ಅಗ್ನಿಶಾಮಕದಳ ಸಂಪರ್ಕಿಸಿದ್ದರು. ಅರ್ಧ ಗಂಟೆ ನಂತರ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿತ್ತು. ಇನ್ನೇನು ಬೆಂಕಿ ನಂದಿಸಲು ಮುಂದಾಗ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿಯ ಎಡವಟ್ಟು ಬಯಲಾಗಿದೆ. ಹೌದು, ನೀರಿಲ್ಲದ ಖಾಲಿ ವಾಹನವನ್ನು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ನಾವು ನೀರು ತುಂಬಿಕೊಂಡು ಬರುತ್ತೇವೆ ಎಂದು ಸ್ಥಳಕ್ಕೆ ಬಂದು ವಾಪಸ್ ಹೋಗಿರುವ ಘಟನೆ ನಡೆದಿದೆ. ಇನ್ನು ಅದೇ ಸಮಯಕ್ಕೆ ಸುರಿದ ಮಳೆ ನೀರಿನಿಂದ ಬೆಂಕಿ ನಂದಿದೆ. ಇಷ್ಟಾಗುತ್ತಲೇ ಹೋಟೆಲ್ ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೀಗ ಅಗ್ನಿಶಾಮಕ ದಳದ ಮಹಾ ಎಡವಟ್ಟಿನ ವೀಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ