ಕಾಜಲ್ ಸೊಂಟ ಮುಟ್ಟಿದ ಯುವಕ: ವಿಡಿಯೋ ವೈರಲ್
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟಿ ಕಾಜಲ್ ಅಗರ್ವಾಲ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಅನುಚಿತವಾಗಿ ವರ್ತಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಿಡಿಗೇಡಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಈ ಘಟನೆಯಿಂದ ಕಾಜಲ್ ಅಗರ್ವಾಲ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರಿಗೆ ಬೇಸರ ತರಿಸುವಂತಹ ಘಟನೆ ನಡೆದಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಅವರು ತೆರಳಿದ್ದರು. ಅಲ್ಲಿ ಜನಸಂದಣಿ ಸೇರಿತ್ತು. ಈ ವೇಳೆ ಕಾಜಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಕಾಜಲ್ ಅವರನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಇದರಿಂದ ನಟಿಗೆ ಶಾಕ್ ಆಗಿದೆ. ಕೂಡಲೇ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಸಂದರ್ಭದ ವಿಡಿಯೋ (Kajal Aggarwal Viral Video) ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಆ ವ್ಯಕ್ತಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕಾಜಲ್ ಅಗರ್ವಾಲ್ ಅವರು ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿಬೀಳುತ್ತಾರೆ. ಹೈದರಾಬಾದ್ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬನು ಸೊಂಟಕ್ಕೆ ಕೈ ಹಾಕಿದ್ದಾನೆ! ಇದು ಕಾಜಲ್ ಅವರಿಗೆ ಕಿರಿಕಿರಿ ಉಂಟು ಮಾಡಿದೆ.
ವೈರಲ್ ವಿಡಿಯೋ:
Fan/random Guy Misbehaving with actress #KajalAggarwal in a event🙄🙄 pic.twitter.com/I68WdTbxLl
— Movies & Entertainment (@Movies_Ent_) March 6, 2024
ನಟಿಯರಿಗೆ ಈ ರೀತಿ ಮುಜುಗರ ಆಗುವಂತಹ ಘಟನೆ ನಡೆದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ನಟಿ ಅಪರ್ಣಾ ಬಾಲಮುರಳಿ ಅವರಿಗೂ ಇದೇ ರೀತಿ ಆಗಿತ್ತು. ಹಾಗೆಯೇ ಸಾರಾ ಅಲಿ ಖಾನ್, ಅಹಾನಾ ಕುಮಾರ್ ಮುಂತಾದ ನಟಿಯರು ಕೂಡ ಕಿಡಿಗೇಡಿಗಳ ಕಾಟ ಅನುಭವಿಸಿದ್ದರು. ಅಭಿಮಾನಿಗಳು ಎಂಬ ಸಲಿಗೆಯಿಂದ ಹತ್ತಿರಕ್ಕೆ ಬಿಟ್ಟುಕೊಂಡರೆ ಈ ರೀತಿ ಆದಾಗ ನಟಿಯರಿಗೆ ಬೇಸರ ಉಂಟಾಗುತ್ತದೆ.
ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್ ಅಗರ್ವಾಲ್; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ
ಕಾಜಲ್ ಅಗರ್ವಾಲ್ ಅವರಿಗೆ ಈಗ 38 ವರ್ಷ ವಯಸ್ಸು. ಈಗಲೂ ಅವರು ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಮಗಧೀರ’ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಮದುವೆ ನಂತರವೂ ಅವರ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಬಹುನಿರೀಕ್ಷಿತ ‘ಇಂಡಿಯನ್ 2’ ಸಿನಿಮಾಗೆ ಅವರು ನಾಯಕಿ ಆಗಿದ್ದಾರೆ. ಅಲ್ಲದೇ, ಇನ್ನೂ ಅನೇಕ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ‘ಉಮಾ’, ‘ಸತ್ಯಭಾಮಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 2.7 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.