ಮುನಿಸಿಕೊಂಡ ನಾಯಕರನ್ನು ಒಂದೇ ವೇದಿಕೆಗೆ ಹತ್ತಿಸಿದ ಕೋಲಾರ ರಾಹುಲ್ ಕಾರ್ಯಕ್ರಮದ ನೇರಪ್ರಸಾರ

Edited By:

Updated on: Apr 17, 2024 | 4:18 PM

ರಾಹುಲ್ ಗಾಂಧಿ ಅವರು ಮಂಡ್ಯ ಸಮಾವೇಶ ಮುಗಿಸಿಕೊಂಡು ಇದೀಗ ಕೋಲಾರಕ್ಕೆ ಆಗಮಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರ ಈ ಕಾರ್ಯಕ್ರಮ ಮುನಿಸಿಕೊಂಡ ನಾಯಕರನ್ನು ಒಂದೇ ವೇದಿಕೆಗೆ ಹತ್ತಿಸಿದೆ. ಹೌದು..ಕೋಲಾರ ಕಾಂಗ್ರೆಸ್​ನಲ್ಲಿ ಬಣ ಬಡಿದಾಟ ನಡೆಯುತ್ತಿದೆ. ಆದ್ರೆ, ರಾಹುಲ್ ಗಾಂಧಿ ಅವರ ಆಗಮನದಿಂದಾಗಿ ರಮೇಶ್ ಕುಮಾರ್ ಮತ್ತು ಕೆಎಚ್​ ಮುನಿಯಪ್ಪ ಎರಡೂ ಬಣದ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಇನ್ನು ಕೋಲಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ನೇರಪ್ರಸಾರ ಇಲ್ಲಿದೆ ನೋಡಿ.

ಕೋಲಾರ, (ಏಪ್ರಿಲ್ 17): ಲೋಕಸಭಾ ಚುನಾವಣೆ  (Loksabha Elections 2024)ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)  ಇಂದು (ಏಪ್ರಿಲ್ 17) ಮೊದಲಿಗೆ ಸಕ್ಕರೆ ನಾಡು ಮಂಡ್ಯದಲ್ಲಿ(Mandya) ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಮಂಡ್ಯ ಸಮಾವೇಶ ಮುಗಿಸಿಕೊಂಡು ಕೋಲಾರದಲ್ಲಿ ನಡೆಯುತ್ತಿರುವ ಬೃಹತ್ ಕಾಂಗ್ರೆಸ್​ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದು, ಈ ವೇಳೆ ಮುನಿಸಿಕೊಂಡಿ ಕೆಲ ಕಾಂಗ್ರೆಸ್ ನಾಯಕರು ಸಹ ಹಾಜರಾಗಿರುವುದು ವಿಶೇಷವಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮುನಿಯಪ್ಪ ನಡುವೆ ಬಣ ಬಡಿದಾಟ ನಡೆದಿದೆ. ಆದ್ರೆ, ಎಲ್ಲಾ ಅಸಮಾಧಾನ ಬಿಟ್ಟು ಇಂದಿನ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ, ಮುನಿಸಿಕೊಂಡಿದ್ದ ಸಚಿವ ಹೆಎಚ್​ ಮುನಿಯಪ್ಪ, ಅವರ ಪುತ್ರಿ ರೂಪಾ ಶಶಿಧರ್ ಸೇರಿದಂತೆ ಹಲವರು ಹಾಜರಾಗಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ ಈ ಕಾರ್ಯಕ್ರಮ ಮುನಿಸಿಕೊಂಡ ನಾಯಕರನ್ನು ಒಂದೇ ವೇದಿಕೆಗೆ ಹತ್ತಿಸಿದೆ. ಇನ್ನು ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿ

Loading...
Unable to load recommendations.
Follow Us
TV9 Web

TV9 Kannada

Read More