ವಿಜಯಪುರ: ಬೋರ್​​ವೆಲ್​ನಿಂದ ಮಗುವನ್ನು ಹೊರೆ ತೆಗೆಯುವ ರೋಚಕ ದೃಶ್ಯ ಇಲ್ಲಿದೆ ನೋಡಿ

|

Updated on: Apr 04, 2024 | 2:18 PM

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ 20-22 ಅಡಿ ಆಳದಲ್ಲಿ ಬೋರ್​ವೆಲ್​ನಲ್ಲಿ ಸಿಲುಕಿದ್ದ 2 ವರ್ಷದ ಕಂದಮ್ಮ ಸಾತ್ವಿಕ್​ನನ್ನು ಜೀವಂತ ಹೊರತೆಗೆಯುವಲ್ಲಿ ರಕ್ಷಣಾ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ. ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣಾ ಸಿಬ್ಬಂದಿ ಸಾತ್ವಿಕ್​​ನನ್ನು ಹೊರ ತೆಗೆಯುತ್ತಿರುವ ರೋಚಕ ದೃಶ್ಯದ ಎಕ್ಸ್​​ಕ್ಲೂಸಿವ್ ವಿಡಿಯೋ ‘ಟಿವಿ9’ಗೆ ದೊರೆತಿದೆ. ಅದು ಇಲ್ಲಿದೆ ನೋಡಿ.

ವಿಜಯಪುರ, ಏಪ್ರಿಲ್ 4: ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ (Lachyana) ಗ್ರಾಮದಲ್ಲಿ ಕೊಳವೆ ಬಾವಿಗೆ (Borewell) ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಎನ್​ಡಿಆರ್​ಎಫ್ ಹಾಗೂ ಎಸ್​​ಡಿಆರ್​ಎಫ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕೊನೆಗೂ ಸಾತ್ವಿಕ್ ಪೋಷಕರು, ಆತನ ಉಳಿವಿಗಾಗಿ ಪ್ರಾರ್ಥಿಸುತ್ತಿದ್ದ ಸಹಸ್ರಾರು ಮಂದಿ ನಿಟ್ಟುಸಿರುಬಿಡುವಂತಾಗಿದೆ. ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣಾ ಸಿಬ್ಬಂದಿ ಸಾತ್ವಿಕ್​​ನನ್ನು ಹೊರ ತೆಗೆಯುತ್ತಿರುವ ರೋಚಕ ದೃಶ್ಯದ ಎಕ್ಸ್​​ಕ್ಲೂಸಿವ್ ವಿಡಿಯೋ ‘ಟಿವಿ9’ಗೆ ದೊರೆತಿದೆ.

ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಆಂಬುಲೆನ್ಸ್​​ ಸಿದ್ಧವಾಗಿ ಇರಿಸಲಾಗಿತ್ತು. ಜತೆಗೆ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಮಗುವನ್ನು ಹೊರ ತೆಗೆದ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಇಂಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಲಚ್ಯಾಣ ಗ್ರಾಮದಲ್ಲಿ 500 ಅಡಿ ಆಳದ ಕೊಳವೆ ಬಾವಿಗೆ ಸಾತ್ವಿಕ್ ಬುಧವಾರ ಬಿದ್ದಿದ್ದ. ಆತ ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿದ್ದ.

ಇದನ್ನೂ ಓದಿ: ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ರಕ್ಷಣೆ, ಫಲಿಸಿದ ಪ್ರಾರ್ಥನೆ

ಮಗುವನ್ನು ಸುರಕ್ಷಿತವಾಗಿ ಹೊರತೆಗೆಯುವುದಕ್ಕಾಗಿ ಕಲ್ಲು ಕತ್ತರಿಸುವ ಯಂತ್ರದಿಂದ ಕಲ್ಲು ಕತ್ತರಿಸಲಾಗಿತ್ತು. ಕಲ್ಲು ಕತ್ತರಿಸಿ ಮಗುವನ್ನು ರಕ್ಷಣೆ ಮಾಡಲಾಯಿತು. ಇದೇ ವೇಳೆ, ಧೂಳು ನಿಯಂತ್ರಿಸಲು ವಾಕ್ಯೂಂ ಕ್ಲೀನರ್​ ಬಳಕೆ ಮಾಡಲಾಯಿತು. ಧೂಳಿನಿಂದಾಗಿ ಮಗುವಿಗೆ ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 04, 2024 02:17 PM