ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲಿಸಿದ ಗೃಹ ಸಚಿವರು

Updated By: Ganapathi Sharma

Updated on: Jun 27, 2025 | 12:54 PM

ಕರ್ನಾಟಕ ರಾಜ್ಯ ಪೊಲೀಸರ ಟೋಪಿ ಬದಲಾವಣೆಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು, ಆ ಕುರಿತ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಹೀಗಾಗಿ ಗೃಹ ಸಚಿವರು ಶುಕ್ರವಾರ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸರ ಟೋಪಿಗಳ ಪರಿಶೀಲನೆ ನಡೆಸಿದರು. ಶೀಘ್ರದಲ್ಲೇ ಈ ಕುರಿತ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಒಂದು ವೇಳೆ ಅಂತಿಮ ನಿರ್ಧಾರ ಪ್ರಕಟವಾದಲ್ಲಿ ಕರ್ನಾಟಕ ಪೊಲೀಸರ ಟೋಪಿ ಯಾವ ರೀತಿ ಇರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಬೆಂಗಳೂರು, ಜೂನ್ 27: ಪೊಲೀಸರ ಟೋಪಿಯ ವಿನ್ಯಾಸ ಬದಲಾಯಿಸಲು ಕರ್ನಾಟಕ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್​ಗಳನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಪರಿಶೀಲನೆ ನಡೆಸಿದರು. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಕ್ಯಾಪ್​ಗಳನ್ನು ಅವರು ವೀಕ್ಷಿಸಿದರು. ಪ್ರಸ್ತಾವಿತ ಕರ್ನಾಟಕ ಪೊಲೀಸ್ ಕ್ಯಾಪ್ ಮಾದರಿ ಬಗ್ಗೆ ಚರ್ಚೆ ನಡೆಸಿದರು. ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕ್ಯಾಪ್ ಬದಲಾವಣೆಗೆ ಇಲಾಖೆ ಚಿಂತನೆ ನಡೆಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ