ಬೆಂಗಳೂರಿನಲ್ಲಿ ನಿರಂತರ ಮಳೆ; ಲಿಡೋ ಮಾಲ್ ಬಳಿ ಮನೆ ಕುಸಿತ

ಬೆಂಗಳೂರಿನಲ್ಲಿ ನಿರಂತರ ಮಳೆ; ಲಿಡೋ ಮಾಲ್ ಬಳಿ ಮನೆ ಕುಸಿತ

TV9 Web
| Updated By: preethi shettigar

Updated on:Nov 19, 2021 | 10:24 AM

ಸುಮಾರು 60 ವರ್ಷ ಹಳೆಯ ಮನೆಯಾಗಿದ್ದರಿಂದ ಕುಸಿಯುವ ಆತಂಕವಿತ್ತು. ಹೀಗಾಗಿ ನಿನ್ನೆ(ನವೆಂಬರ್​ 18) ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮ ಅಪಾಯ ತಪ್ಪಿದಂತಾಗಿದೆ. ಸದ್ಯ  ಮನೆಯವರು ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಬೆಂಗಳೂರಿನಲ್ಲಿ ಜಿಟಿ- ಜಿಟಿ ಮಳೆ ಇತ್ತು. ಆದರೆ ನಿನ್ನೆ (ನವೆಂಬರ್ 18) ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟದ ಪರಿಣಾಮ ಕೆಲವು ಕಡೆ ರಸ್ತೆಗಳು ಕೆರೆಯಂತಾದರೆ ಮತ್ತೆ ಹಲವು ಕಡೆ ಜನರ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಮಳೆ ಹಿನ್ನೆಲೆ ಇಂದು ಮುಂಜಾನೆ ಬೆಂಗಳೂರಿನ ಲಿಡೋ ಮಾಲ್ ಬಳಿ ಮನೆ ಕುಸಿದುಬಿದ್ದಿದೆ. ಕುಸಿದುಬಿದ್ದ ಮನೆಯಲ್ಲಿ ಮೂವರು ವಾಸಿಸುತ್ತಿದ್ದರು. ಸುಮಾರು 60 ವರ್ಷ ಹಳೆಯ ಮನೆಯಾಗಿದ್ದರಿಂದ ಕುಸಿಯುವ ಆತಂಕವಿತ್ತು. ಹೀಗಾಗಿ ನಿನ್ನೆ ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮ ಅಪಾಯ ತಪ್ಪಿದಂತಾಗಿದೆ. ಸದ್ಯ  ಮನೆಯವರು ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ

Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್​ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ

Karnataka Rains: ಭಾರಿ ಮಳೆಗೆ ತತ್ತರಿಸಿದ ಜನತೆ; ದಾವಣಗೆರೆ, ಚಿತ್ರದುರ್ಗದಲ್ಲಿ ಅಪಾರ ಪ್ರಮಾಣದ ಹಾನಿ

Published on: Nov 19, 2021 10:23 AM