ಟೆನಿಸ್ ತಾರೆ ರೋಹನ್ ಬೋಪಣ್ಣರನ್ನು ಸನ್ಮಾನಿಸಿದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ
ಕೆಎಸ್ಎಲ್ಟಿಎ ಅಧ್ಯಕ್ಷ ಸುನೀಲ್ ಯಜಮಾನ್ ಹಾಗೂ ರೋಹನ್ ಅವರ ಸ್ನೇಹಿತರು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಮೈಸೂರು ಪೇಟ ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಸಹ ಆಟಗಾರ ಮ್ಯಾಥ್ಯೂ ಎಬ್ಡೇನ್ ಹಾಗೂ ರೋಹನ್ ಬೋಪಣ್ಣ ಅವರ ಭಾವಚಿತ್ರವನ್ನ ಕೂಡ ಉದ್ಘಾಟಿಸಲಾಯಿತು.
ಬೆಂಗಳೂರು, ಫೆಬ್ರವರಿ 13: ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಟೆನಿಸ್ ಟೂರ್ನಿ (Australian Open doubles champion) ಫೈನಲ್ ಗೆಲ್ಲುವ ಮೂಲಕ ಸಾಧನೆ ಮಾಡಿದ್ದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (Karnataka State Lawn Tennis Association) ಸನ್ಮಾನಿಸಿ, ಗೌರವಿಸಿದೆ. ತಮ್ಮ 43ನೇ ವಯಸ್ಸಿನಲ್ಲಿ ರೋಹನ್ ಈ ಸಾಧನೆ ಮಾಡಿದ್ದು, ಭಾರತದ ಟೆನಿಸ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್ಎಲ್ಟಿಎ ನಿನ್ನೆ ಸೋಮವಾರ ಸಂಜೆ ಅದ್ದೂರಿ ಸಮಾರಂಭದಲ್ಲಿ ಸನ್ಮಾನ ಮಾಡಿದೆ.
ಕೆಎಸ್ಎಲ್ಟಿಎ ಅಧ್ಯಕ್ಷ ಸುನೀಲ್ ಯಜಮಾನ್ ಹಾಗೂ ರೋಹನ್ ಅವರ ಸ್ನೇಹಿತರು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಮೈಸೂರು ಪೇಟ ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಸಹ ಆಟಗಾರ ಮ್ಯಾಥ್ಯೂ ಎಬ್ಡೇನ್ ಹಾಗೂ ರೋಹನ್ ಬೋಪಣ್ಣ ಅವರ ಭಾವಚಿತ್ರವನ್ನ ಕೂಡ ಉದ್ಘಾಟಿಸಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ