‘ಒಂದು ಸರಳ ಪ್ರೇಮಕಥೆ’ಯ ರಿಮೇಕ್​ ಹಕ್ಕು ಖರೀದಿಸಲು ಬಂದ ಪರಭಾಷಿಗರು

‘ಒಂದು ಸರಳ ಪ್ರೇಮಕಥೆ’ಯ ರಿಮೇಕ್​ ಹಕ್ಕು ಖರೀದಿಸಲು ಬಂದ ಪರಭಾಷಿಗರು

ರಾಜೇಶ್ ದುಗ್ಗುಮನೆ
|

Updated on: Feb 13, 2024 | 8:18 AM

‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ನಿರ್ದೇಶಕ ಸುನಿ ಹಾಗೂ ನಟ ವಿನಯ್ ರಾಜ್​ಕುಮಾರ್ ದೊಡ್ಡ ಗೆಲುವು ಕಂಡಿದ್ದಾರೆ. ಫೆಬ್ರವರಿ 9ರಂದು ರಿಲೀಸ್ ಆದ ಈ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಹಿಟ್ ಆದ ಬಳಿಕ ಅದರ ರಿಮೇಕ್ ಹಕ್ಕಿಗೆ ಬೇಡಿಕೆ ಬರೋದು ಸಹಜ. ಇದಕ್ಕೆ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೂಡ ಹೊರತಾಗಿಲ್ಲ.

ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ (Ondu Sarala Premakathe) ಯಶಸ್ಸು ಕಂಡಿದೆ. ವಿನಯ್ ರಾಜ್​ಕುಮಾರ್ ಮಲ್ಲಿಕಾ ಸಿಂಗ್, ಸ್ವಾದಿಷ್ಟಾ ಮೊದಲಾದವರು ನಟಿಸಿರೋ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಹಿಟ್ ಆದ ಬಳಿಕ ಅದರ ರಿಮೇಕ್ ಹಕ್ಕಿಗೆ ಬೇಡಿಕೆ ಬರೋದು ಸಹಜ. ಈಗ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ರಿಮೇಕ್​ ಹಕ್ಕನ್ನು ಪರಭಾಷಿಗರು ಕೇಳುತ್ತಿದ್ದಾರೆ. ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಕೂಡ ಆಗುತ್ತಿದೆ. ಈ ಚಿತ್ರ ನಿರ್ಮಾಣ ಮಾಡಿದ ಮೈಸೂರು ರಮೇಶ್​​ ಖುಷಿಯಾಗಿದ್ದಾರೆ. ಅವರು ಸಿನಿಮಾ ರಿಮೇಕ್ ಹಕ್ಕಿಗೆ ಬೇಡಿಕೆ ಬಂದಿರೋ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ