ಇಡಿ ಬಂಧನದ ಭೀತಿಯಿಂದ ಖಾಸಗಿ ಕಾರಿನಲ್ಲಿ ದದ್ದಲ್ ಪರಾರಿ, ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ
ವಾಲ್ಮೀಕಿ ಹಗರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಕದ್ದುಮುಚ್ಚಿ ಓಡಾಡುತ್ತಿದ್ದಾರೆ. ಯಾವಾಗ ಇಡಿ ಬಂಧಿಸುತ್ತೋ ಎನ್ನುವ ಆತಂಕಡದಲ್ಲಿ ಯಾರಿಗೂ ಕಣ್ಣಿಗೆ ಬೀಳದಂತೆ ಬೇರೆ-ಬೇರೆ ಸ್ಥಳಕ್ಕೆ ಓಡಾಡುತ್ತಿದ್ದಾರೆ. ಇಂದು ಖಾಸಗಿ ಕಾರಿನಲ್ಲಿ ಮಂತ್ರಾಲಯ ಮಾರ್ಗವಾಗಿ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಟಿವಿ9ಗೆ ಲಭ್ಯವಾಗಿದೆ.
ರಾಯಚೂರು, (ಜುಲೈ 14): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ ಈ ಇಲಾಖೆಯ ಸಚಿವರಾಗಿದ್ದ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದರ ಮಧ್ಯ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನಿವಾಸಗಳ ಮೇಲೂ ಇಡಿ ದಾಳಿಯಾಗಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀನಲೆ ಮಾಡಿದೆ. ಹೀಗಾಗಿ ನಿಗದ ಅಧ್ಯಕ್ಷರಾಗಿರುವ ದದ್ದಲ್ಗೂ ಬಂಧನದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಕೇಪ್ ಆಗಿದ್ದ ದದ್ದಲ್ ಇಂದು ರಾಯಚೂರಿನಲ್ಲಿ ಪ್ರತ್ಯೇಕ್ಷರಾಗಿದ್ದಾರೆ. ಇಂದು (ಜುಲೈ 14) ದದ್ದಲ್ ರಾಯಚೂರಿನಿಂದ ಮಂತ್ರಾಲಯ ರಸ್ತೆ ಮಾರ್ಗವಾಗಿ ಕಾರಿನಲ್ಲಿ ತೆರಳಿದ್ದಾರೆ. ಪಕ್ಕದಲ್ಲಿ ಓರ್ವ ಆಪ್ತ, ಚಾಲಕನ ಪಕ್ಕ ಮತ್ತೊಬ್ಬ ಆಪ್ತನ ಜೊತೆ ಕಾರಿನಲ್ಲಿ ಸ್ಪೀಡ್ ಆಗಿ ತೆರಳಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಮತ್ತೊಂದೆಡೆ ಇಡಿ ತಂಡ ಕಳೆದ ಎರಡು ದಿನಗಳಿಂದ ರಾಯಚೂರು ಸುತ್ತಲೂ ಬೀಡು ಬಿಟ್ಟಿದೆ. ಇತ್ತ ದದ್ದಲ್ ಇಡಿ ಕಣ್ತಪ್ಪಿಸಿಕೊಂಡು ಕಾರಿನಲ್ಲಿ ಹೋಗಿದ್ದು ಹಲವು ಶಂಕೆಗಳು ವ್ಯಕ್ತವಾಗಿವೆ. ಮಂತ್ರಾಲಯ ಮಾರ್ಗವಾಗಿ ಆಂಧ್ರಪ್ರದೇಶತ್ತ ತೆರಳಿದ್ರಾ? ಅಥವಾ ಬೆಂಗಳೂರಿಗೆ ಹೋದ್ರಾ? ಎನ್ನುವುದು ನಿಗೂಢವಾಗಿದೆ.