ರಾಜ್ಯ ಕಾಂಗ್ರೆಸ್​ನ ಪ್ರಮುಖರು ಪುನಃ ದೆಹಲಿಗೆ ಹೋಗಿದ್ದಾರೆ, ಸಿದ್ದರಾಮಯ್ಯ ಮತ್ತು ಜಮೀರ್ ಒಟ್ಟಿಗೆ ಕಂಡರು!

Edited By:

Updated on: Jun 28, 2022 | 4:24 PM

ಮಾಧ್ಯಮಗಳೊಂದಿಗೆ ಮಾತಾಡಲು ಹಿಂಜರಿಯದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗಿರುವ ಅರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ಕಚೇರಿಯಿಂದ ಗುತ್ತಿಗೆದಾರರ ಸಂಘಕ್ಕೆ ಪತ್ರ ಹೋಗಿದೆ ಎಂದು ಮಾಧ್ಯಮದವರು ಹೇಳಿದಾಗಲೂ ಆಮೇಲೆ ಮಾತಾಡ್ತೀನಿ ಅಂತ ಹೇಳಿ ಲಿಫ್ಟ್ ನೊಳಗೆ ಸೇರಿಕೊಂಡರು.

Delhi: ಕರ್ನಾಟಕ ಕಾಂಗ್ರೆಸ್ ನ ಪ್ರಮುಖ ನಾಯಕರೆಲ್ಲ ಪುನಃ ದೆಹಲಿ ಸೇರಿದ್ದಾರೆ ಮಾರಾಯ್ರೇ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಇತರ ಕೆಲ ನಾಯಕರು ದೆಹಲಿಯಲ್ಲಿದ್ದಾರೆ. ಮಾಧ್ಯಮಗಳಿಗೆ ಕಣ್ಣಿಗೆ ಬಿದ್ದಿದ್ದು ಮಾತ್ರ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ (Zameer Ahmed). ಅವರಿಬ್ಬರೂ ಅವಸರದಲ್ಲಿದ್ದಂತೆ ಕಂಡರು.

ಸಾಮಾನ್ಯವಾಗಿ ಮಾಧ್ಯಮಗಳೊಂದಿಗೆ ಮಾತಾಡಲು ಹಿಂಜರಿಯದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗಿರುವ ಅರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ಕಚೇರಿಯಿಂದ ಗುತ್ತಿಗೆದಾರರ ಸಂಘಕ್ಕೆ ಪತ್ರ ಹೋಗಿದೆ ಎಂದು ಮಾಧ್ಯಮದವರು ಹೇಳಿದಾಗಲೂ ಆಮೇಲೆ ಮಾತಾಡ್ತೀನಿ ಅಂತ ಹೇಳಿ ಲಿಫ್ಟ್ ನೊಳಗೆ ಸೇರಿಕೊಂಡರು.

ಇದನ್ನೂ ಓದಿ:  Viral Video: ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ ಟ್ವಿಟ್ಟಿಗನಿಗೆ ಅಚ್ಚರಿಯ ಉತ್ತರ ನೀಡಿದ ಆನಂದ್ ಮಹೀಂದ್ರಾ