ಕಾರವಾರ: ಭೀಕರ ಸಮುದ್ರ ಕೊರೆತಕ್ಕೆ ಕೊಚ್ಚಿ ಹೋದ ಮನೆಗಳು, ವಿಡಿಯೋ ನೋಡಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಭೀಕರ ಸಮುದ್ರ ಕೊರೆತಕ್ಕೆ ಎರಡು ಮನೆಗಳು ಕೊಚ್ಚಿ ಹೋಗಿರುವಂತಹ ಘಟನೆ ನಡೆದಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದರಿಂದ ಮನೆಗಳು ಸಮುದ್ರ ಪಾಲಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಗಳು ಕೊಚ್ಚಿ ಹೋಗುತ್ತಿರುವ ವಿಡಿಯೋ ನೋಡಿ.
ಕಾರವಾರ, ಆಗಸ್ಟ್ 24: ಭೀಕರ ಸಮುದ್ರ ಕೊರೆತಕ್ಕೆ ಎರಡು ಮನೆಗಳು ಕೊಚ್ಚಿ ಹೋಗಿರುವಂತಹ (Houses washed) ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ನಡೆದಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ತರಂಗಮೇಟ ಬಳಿಯ ಅಶೋಕ್ ಹರಿಕಂತ್ರ ಎಂಬವರ ಮನೆ ಸಮುದ್ರದಲ್ಲಿ ಕೊಚ್ಚಿ ಹೋಗಿದೆ. ಒಂದು ವೇಳೆ ಸಮುದ್ರ ಅಬ್ಬರ ಹೆಚ್ಚಾದ್ದರೆ 200 ಮನೆಗಳಿಗೆ ಆತಂಕ ಎದುರಾಗಲಿದೆ. ಇಲ್ಲಿಯ ಮನೆ ಬೀಳುವ ಸಾಧ್ಯತೆಯ ಬಗ್ಗೆ ಜೂನ್ ತಿಂಗಳಲ್ಲೆ ವರದಿ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದರಿಂದ ಮನೆ ಸಮುದ್ರ ಪಾಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Sat, 24 August 24