ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ: ತಪ್ಪಿದ ಅನಾಹುತ

Edited By:

Updated on: May 07, 2026 | 6:51 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಬರುತ್ತಿದ್ದ 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಪಲ್ಟಿಯಾಗಿದೆ. ಸೂರತ್‌ನಿಂದ ಮೂರು ತಿಂಗಳು ಪ್ರಯಾಣಿಸಿ, ಕೈಗಾ ಅಣುಸ್ಥಾವರ ತಲುಪಲು ಕೇವಲ 4 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ಕಾರವಾರ, ಮೇ 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಸಲಕರಣೆ ಹೊತ್ತಿದ್ದ ಭಾರೀ ವಾಹನವೊಂದು ಪಲ್ಟಿಯಾಗಿದೆ. ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸೂರತ್‌ನಿಂದ ತರಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನವೇ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕೈಗಾ ಅಣುಸ್ಥಾವರದ ವಿಸ್ತರಣಾ ಕಾಮಗಾರಿಗಾಗಿ ಅತ್ಯಗತ್ಯವಾಗಿದ್ದ ಈ ವಿಕಿರಣ ರಕ್ಷಾ ಕವಚವನ್ನು ಸೂರತ್‌ನಿಂದ ರಸ್ತೆಯ ಮೂಲಕ ಅತ್ಯಂತ ಜಾಗರೂಕತೆಯಿಂದ ಸಾಗಿಸಲಾಗುತ್ತಿತ್ತು. ಆದರೆ ಮಲೆನಾಡಿನ ತಿರುವು ರಸ್ತೆಗಳಲ್ಲಿ ಸಾಗುವಾಗ ಪಲ್ಟಿಯಾಗಿ ಅವಘಡ ಸಂಭವಿಸಿದೆ. 140 ಟನ್ ಭಾರ ಇರುವುದರಿಂದ ವಾಹನವನ್ನು ಮೇಲೆತ್ತಲು ಬೃಹತ್ ಕ್ರೇನ್‌ಗಳ ಅವಶ್ಯಕತೆಯಿದ್ದು, ಸ್ಥಳಕ್ಕೆ ಕೈಗಾ ಅಧಿಕಾರಿಗಳು ಮತ್ತು ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 07, 2026 06:48 PM
Follow Us