K Shivaram No More: ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ ‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಸುಧೀರ್
K Shivaram No More: ಫೆಬ್ರುವರಿ 3 ರಿಂದ ಅನಾರೋಗ್ಯಕ್ಕೀಡಾಗಿದ್ದ ಶಿವರಾಮ್ ಫೆಬ್ರವರಿ 28 ರಂದು ರಕ್ತದದೊತ್ತಡದಲ್ಲಿ ಏರುಪೇರಾಗಿ ಹೃದಯಾಘಾತಕ್ಕೊಳಗಾಗಿದ್ದರು. ರವೀಂದ್ರ ಕಲಾಕ್ಷೇತ್ರದ ಬಳಿ ನೂಕುನುಗ್ಗಲು ಉಂಟಾಗದ ಹಾಗೆ ಬ್ಯಾರಿಕೇಡಿಂಗ್ ಮಾಡಲಾಗಿದೆ ಮತ್ತು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬೆಂಗಳೂರು: ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಪಾಸು ಮಾಡಿದವರಲ್ಲಿ ಮೊದಲಿಗರೆನಿಸಿಕೊಂಡಿದ್ದ ಕೆ ಶಿವರಾಮ್ (K Shivaram) ಅವರ ಪಾರ್ಥೀ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯಿರುವ ಅವರ ನಿವಾಸದಿಂದ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ (Ravindra Kalakshetra) ತರಲಾಗಿದ್ದು ಜನ ತಂಡೋಪತಂಡವಾಗಿ ಬಂದು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಫೆಬ್ರುವರಿ 3 ರಿಂದ ಅನಾರೋಗ್ಯಕ್ಕೀಡಾಗಿದ್ದ ಶಿವರಾಮ್ ಫೆಬ್ರವರಿ 28 ರಂದು ರಕ್ತದದೊತ್ತಡದಲ್ಲಿ ಏರುಪೇರಾಗಿ ಹೃದಯಾಘಾತಕ್ಕೊಳಗಾಗಿದ್ದರು. ರವೀಂದ್ರ ಕಲಾಕ್ಷೇತ್ರದ ಬಳಿ ನೂಕುನುಗ್ಗಲು ಉಂಟಾಗದ ಹಾಗೆ ಬ್ಯಾರಿಕೇಡಿಂಗ್ ಮಾಡಲಾಗಿದೆ ಮತ್ತು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹಲವಾರು ಗಣ್ಯರು ಶಿವರಾಮ್ ಅವರಿಗೆ ತಮ್ಮ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಅತಿ ದೊಡ್ಡ ಹಿಟ್ ಗಳಲ್ಲಿ ಒಂದೆನಿಸಿಕೊಂಡಿರುವ ‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಸುಧೀರ್ (Tarun Sudhir) ಛಲವಾದಿ ಹೋರಾಟದ ಮುಂಚೂಣಿಯಲ್ಲಿದ್ದ ಶಿವರಾಮ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆ ಶಿವರಾಮ್ ನಿಧನಕ್ಕೆ ಕಾರಣವೇನು? ಅಂತಿಮ ದರ್ಶನ ಎಲ್ಲಿ?