ಹಾಸನ: ಕಾಂಗ್ರೆಸ್ ಸಮಾವೇಶಕ್ಕೆ ಬಸ್ ಉಂಟು, ಪಿಯು ಪರೀಕ್ಷೆ ಬರೆಯಲು ಹೋಗುವ ಮಕ್ಕಳಿಗೆ ಬಸ್ಸಿಲ್ಲ! ಸರ್ಕಾರದ ಹೊಸ ಗ್ಯಾರಂಟಿ

ಸರ್ಕಾರವೇನಾದರೂ ಮಾಡಿಕೊಳ್ಳಲಿ, ಅದು ನಮಗೆ ಸಂಬಂಧಿಸಿದ ವಿಚಾರ, ಅದರೆ ಸಮಾವೇಶಕ್ಕೆ ಅವರು ಖಾಸಗಿ ಬಸ್ ಗಳ ಏರ್ಪಾಟು ಮಾಡಿಕೊಳ್ಳಬಹುದಿತ್ತು, ನಮ್ಮನ್ನು ಸಮಸ್ಯೆಗೆ ದೂಡಿ ಸಮಾವೇಶ ಮಾಡಿಕೊಳ್ಳುವುದು ಯಾವ ಪುರುಷಾರ್ಥ ಎಂದು ವಿದ್ಯಾರ್ಥಿಗಳು ತಮ್ಮ ಕೋಪ, ಅಸಹನೆ ಹೊರಹಾಕುತ್ತಿದ್ದಾರೆ.

ಹಾಸನ: ಕಾಂಗ್ರೆಸ್ ಸಮಾವೇಶಕ್ಕೆ ಬಸ್ ಉಂಟು, ಪಿಯು ಪರೀಕ್ಷೆ ಬರೆಯಲು ಹೋಗುವ ಮಕ್ಕಳಿಗೆ ಬಸ್ಸಿಲ್ಲ! ಸರ್ಕಾರದ ಹೊಸ ಗ್ಯಾರಂಟಿ
|

Updated on: Mar 01, 2024 | 12:40 PM

ಹಾಸನ: ಇದು ಸರ್ಕಾರದ (Karnataka government) ನಿಷ್ಕಾಳಜಿ, ಬೇಜವಾಬ್ದಾರಿತನ ಮತ್ತು ಉಡಾಫೆ ಮನೋಭಾವವಲ್ಲದೆ ಮತ್ತೇನೂ ಅಲ್ಲ. ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷೆಗಿಂತ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಸಮಾವೇಶ (convention) ಮುಖ್ಯವಾಗಿದೆ. ಹಾಸನದಲ್ಲಿ ಇಂದು ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಫಲಾನುಭವಿಗಳ ಬೃಹತ್ ಸಮಾವೇಶ ಏರ್ಪಡಿಸಲಾಗಿದ್ದು ಅದಕ್ಕಾಗಿ ಜಿಲ್ಲೆಯಲ್ಲಿರುವ ಎಲ್ಲ ಕೆಎಸ್ ಆರ್ ಟಿ ಸಿ ಬದ್ ಡಿಪೋಗಳಿಂದ ಸುಮಾರು 700 ಬಸ್ಗಳನ್ನು ಜನರನ್ನು ಸಮಾವೇಶಕ್ಕೆ ಕರೆತರಲು ಬಳಸಿಕೊಳ್ಳಲಾಗಿದೆ. ಹಾಗಾಗಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕಿರುವ ಮಕ್ಕಳ ಸಾರಿಗೆಗೆ ಬಸ್ ಗಳಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು ಮಕ್ಕಳು ಪರದಾಡುತ್ತಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಕೇಂದ್ರ ತಲುಪುತ್ತೆವೆಯೋ ಇಲ್ಲವೋ ಎಂಬ ಆತಂಕಕ್ಕೀಡಾಗಿದ್ದಾರೆ. ಹಾಸನದ ಟಿವಿ9 ವರದಿಗಾರ ವಿದ್ಯಾರ್ಥಿಗಳೊಂದಿಗೆ ಮಾತಾಡಿದ್ದಾರೆ. ಸರ್ಕಾರವೇನಾದರೂ ಮಾಡಿಕೊಳ್ಳಲಿ, ಅದು ನಮಗೆ ಸಂಬಂಧಿಸಿದ ವಿಚಾರ, ಅದರೆ ಸಮಾವೇಶಕ್ಕೆ ಅವರು ಖಾಸಗಿ ಬಸ್ ಗಳ ಏರ್ಪಾಟು ಮಾಡಿಕೊಳ್ಳಬಹುದಿತ್ತು, ನಮ್ಮನ್ನು ಸಮಸ್ಯೆಗೆ ದೂಡಿ ಸಮಾವೇಶ ಮಾಡಿಕೊಳ್ಳುವುದು ಯಾವ ಪುರುಷಾರ್ಥ ಎಂದು ವಿದ್ಯಾರ್ಥಿಗಳು ತಮ್ಮ ಕೋಪ, ಅಸಹನೆ ಹೊರಹಾಕುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆ ರಾಜ್ಯದ ಎಲ್ಲ ಕಂಡಕ್ಟರ್-ಡ್ರೈವರುಗಳ ಜೇಬು ಖಾಲಿ ಮಾಡುತ್ತಿದೆ: ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಲೆಕ್ಕಾಚಾರ ಇಲ್ಲಿದೆ

Follow us