K Shivaram No More: ಅಂತ್ಯಕ್ರಿಯೆಗೆ ಛಲವಾದಿ ಮಹಾಸಭಾ ಆವಣದಲ್ಲಿ ಜಾಗಕ್ಕಾಗಿ ಆಗ್ರಹಿಸಿ ಬೆಂಬಲಿಗರಿಂದ ಪ್ರತಿಭಟನೆ

K Shivaram No More: ಅಂತ್ಯಕ್ರಿಯೆಗೆ ಛಲವಾದಿ ಮಹಾಸಭಾ ಆವಣದಲ್ಲಿ ಜಾಗಕ್ಕಾಗಿ ಆಗ್ರಹಿಸಿ ಬೆಂಬಲಿಗರಿಂದ ಪ್ರತಿಭಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 01, 2024 | 1:36 PM

K Shivaram No More: ಅವರೊಬ್ಬ ಮಹಾನ್ ವ್ಯಕ್ತಿಯಾಗಿದ್ದರು ಮತ್ತು ಛಲವಾದಿ ಹೋರಾಟದ ಮುಂಚೂಣಿಯಲ್ಲಿದ್ದವರು. ಹಾಗಾಗಿ ಅವರ ಅಂತ್ಯಕ್ರಿಯೆ ಛಲವಾದಿ ಮಹಾಸಭಾ ಆವರಣದಲ್ಲೇ ನಡೆಯಬೇಕು ಮತ್ತು ಸರ್ಕಾರ ಜಾಗ ನೀಡಿ ಅಂತಿಮ ವಿಧಾನ ಪೂರೈಸಲು ಅವಕಾಶ ಮಾಡಿಕೊಡಬೇಕೆಂದು ಮಹಾಸಭಾ ಪದಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ನಟ ರಾಜಕಾರಣಿ ಕೆ ಶಿವರಾಮ್ (K Shivaram) ಅವರಿಗೆ ಗಣ್ಯರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಅಂತಿಮ ನಮನ ಸಲ್ಲಿಸುತ್ತಿರುವಂತೆಯೇ ಅವರ ಅಂತ್ಯಕ್ರಿಯೆ ನಡೆದ ನಡೆಸಲು ಛಲವಾದಿ ಮಹಾಸಭಾ ಆವರಣದಲ್ಲಿ (Chalavadi Mahasabha premises) ಜಾಗಕ್ಕೆ ಆಗ್ರಹಿಸಿ ಅವರ ಅಭಿಮಾನಿಗಳು (supporters) ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಬ್ಬ ಮಹಾನ್ ವ್ಯಕ್ತಿಯಾಗಿದ್ದರು ಮತ್ತು ಛಲವಾದಿ ಹೋರಾಟದ ಮುಂಚೂಣಿಯಲ್ಲಿದ್ದವರು. ಹಾಗಾಗಿ ಅವರ ಅಂತ್ಯಕ್ರಿಯೆ ಛಲವಾದಿ ಮಹಾಸಭಾ ಆವರಣದಲ್ಲೇ ನಡೆಯಬೇಕು ಮತ್ತು ಸರ್ಕಾರ ಜಾಗ ನೀಡಿ ಅಂತಿಮ ವಿಧಾನ ಪೂರೈಸಲು ಅವಕಾಶ ಮಾಡಿಕೊಡಬೇಕೆಂದು ಮಹಾಸಭಾ ಪದಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು. ಮತ್ತೊಂದು ಕಡೆ ಶಿವರಾಮ್ ಅಭಿಮಾನಿಗಳು ಮಹಾಸಭಾದ ಆವರಣದಲ್ಲಿ ಜಾಗ ಕೋರಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಒಂದು ಪಕ್ಷ ಸರಕಾರ ಜಾಗ ನೀಡದಿದ್ದರೆ ಶಿವರಾಮ್ ದೇಹವನ್ನು ವಿಧಾನ ಸೌಧದ ಬಳಿ ತಂದು ಪ್ರತಿಭಟನೆ ನಡೆಸುವುದಾಗಿ ಪದಾಧಿಕಾರಿ ಮತ್ತು ಇತರ ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಬಡವರಿಗಾಗಿ 11 ಸಾವಿರ ಮನೆ ಕಟ್ಟಿಸಿದ್ದರು ಕೆ ಶಿವರಾಮ್’