ಸಚಿವ ಉಮೇಶ ಕತ್ತಿ ವಿಧಿವಶ: ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಕತ್ತಿಯವರಿಗಿದ್ದ ಜನಪ್ರಿಯತೆಯನ್ನು ತೋರಿಸುತ್ತದೆ-ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2022 | 11:33 AM

ಯಾವುದೇ ನಾಯಕನಿಗೆ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗುವುದು ಸುಲಭದ ಮಾತಲ್ಲ, ಆದರೆ ಕತ್ತಿ ಅಷ್ಟು ಸಲ ಆಯ್ಕೆಯಾಗಿದ್ದು ಅವರಿಗಿದ್ದ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ರವಿ ಹೇಳಿದರು.

ಬೆಂಗಳೂರು:  ಅಗಲಿರುವ ಉಮೇಶ ಕತ್ತಿಯವರು ನೇರ ಮತ್ತು ನಿಷ್ಠುರ ಸ್ವಭಾವದವರಾಗಿದ್ದರು ಮತ್ತು ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು. ಕೇವಲ 10 ನಿಮಿಷ ಜೊತೆಗಿದ್ದರೂ ತಮ್ಮೊಂದಿಗಿದ್ದವರನ್ನು ನಗೆಗಡಲಲ್ಲಿ ಮುಳುಗಿಸುತ್ತಿದ್ದರು, ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ಅಗಲಿದ ನಾಯಕನಿಗೆ ಸಂತಾಪ ಸೂಚಿಸುತ್ತಾ ಬೆಂಗಳೂರಲ್ಲಿ ಮಾತಾಡಿದ ರವಿ ಅವರು, ಯಾವುದೇ ನಾಯಕನಿಗೆ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗುವುದು ಸುಲಭದ ಮಾತಲ್ಲ, ಆದರೆ ಕತ್ತಿ ಅಷ್ಟು ಸಲ ಆಯ್ಕೆಯಾಗಿದ್ದು ಅವರಿಗಿದ್ದ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ರವಿ ಹೇಳಿದರು.