ಗಿಲ್ಲಿ ಮೇಲಿನ ಅಭಿಪ್ರಾಯ ಕಾವ್ಯಾಗೆ ಸಂಪೂರ್ಣವಾಗಿ ಬದಲಾಯ್ತು
ಗಿಲ್ಲಿ ಹಾಗೂ ಕಾವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಗೆಳೆತನ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಏನೇ ಆದರೂ ಇವರ ಬಾಂಡಿಂಗ್ ಹಾಳಾಗಿಲ್ಲ ಎನ್ನಬಹುದು. ಈಗ ಅವರು ಆಡಿದ ಒಂದು ಮಾತು ಸಾಕಷ್ಟು ಗಮನ ಸೆಳೆದಿದೆ. ಅಷ್ಟಕ್ಕೂ ಏನು ಅದು ಎಂಬುದನ್ನು ಇಲ್ಲಿ ನೋಡೋನ.
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಅವರು ಆಗಾಗ ಗಿಲ್ಲಿಯ ಮೇಲೆ ಸಿಟ್ಟಾಗುವುದನ್ನು ನೀವು ಕಾಣಬಹುದು. ಫ್ರಸ್ಟ್ರೇಟ್ ಆದಾಗ ಕಾವ್ಯಾ ಅವರು ಗಿಲ್ಲಿ ಮೇಲೆ ಕೋಪ ಹೊರ ಹಾಕುತ್ತಾರೆ. ಮನೆಯಲ್ಲಿ ಇದ್ದಾಗ ಅಮ್ಮನ ಮೇಲೆ ಅವರು ಈ ರೀತಿ ಮಾಡುತ್ತಿದ್ದರಂತೆ ಮತ್ತು ಇಲ್ಲಿ ಅದನ್ನು ಗಿಲ್ಲಿ ಮೇಲೆ ಮಾಡುತ್ತಾ ಇದ್ದಾರೆ. ಈ ಬಗ್ಗೆ ಧನುಷ್ ಬಳಿ ಅವರು ಹೇಳಿಕೊಂಡಿದ್ದಾರೆ. ಈ ವಾರ ಗಿಲ್ಲಿಗೆ ಕಳಪೆ ಸಿಕ್ಕಿದೆ. ಹೀಗಾಗಿ, ಜೈಲಿನ ಹೊರಭಾಗದಲ್ಲಿ ಕಾವ್ಯಾ ಮಲಗಿ ತಮ್ಮ ಗೆಳೆತನ ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.