ಬಿಅರ್ ಎಸ್ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸಲು ಹೋಗಿದ್ದ ಕೆಸಿಅರ್ ಪುತ್ರ ಕೆಟಿ ರಾಮರಾವ್ ವಾಹನದ ಮೇಲಿಂದ ಉರುಳಿದರೂ ನೆಲಕ್ಕೆ ಬೀಳಲಿಲ್ಲ!
ನಿಜಾಮಾಬಾದ್ ಜಿಲ್ಲೆಯ ಅರ್ಮೂರ್ ನಲ್ಲಿ ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ತೆರಳುವಾಗ ವಾಹನದ ಮೇಲೆ ನಿಂತಿದ್ದ ರಾಮರಾವ್ ಮತ್ತು ರೆಡ್ಡಿ ಅದಕ್ಕೆ ಕಟ್ಟಿದ್ದ ಬ್ಯಾರಿಕೇಡ್ ಸಡಿಲಗೊಂಡು ಕಿತ್ತು ಬಂದ ಕಾರಣ ಉರುಳಿ ಬಿದ್ದಿದ್ದಾರೆ. ಅವರಿಬ್ಬರೊಂದಿಗೆ ಬೇರೆ ಕೆಲವರು ಸಹ ಉರುಳಿ ಬೀಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅದೃಷ್ಟವಶಾತ್ ಬಿದ್ದವರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ (Telangana Assembly Polls) ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಗಳಲ್ಲಿ ಹೋಗುತ್ತಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ರಾಜ್ಯದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ (KC Chandrashekhar Rao) ಪುತ್ರ ಕೆಟಿ ರಾಮರಾವ್ (KT Rama Rao) ಪಕ್ಷದ ಅಭ್ಯರ್ಥಿ ಜೀವನ್ ರೆಡ್ಡಿ ಅವರ ನಾಮಪತ್ರ ಸಲ್ಲಿಸುವಾಗ ಒಂದು ಅನಾಹುತ ಜರುಗಿದೆ. ನಿಜಾಮಾಬಾದ್ ಜಿಲ್ಲೆಯ ಅರ್ಮೂರ್ ನಲ್ಲಿ ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ತೆರಳುವಾಗ ವಾಹನದ ಮೇಲೆ ನಿಂತಿದ್ದ ರಾಮರಾವ್ ಮತ್ತು ರೆಡ್ಡಿ ಅದಕ್ಕೆ ಕಟ್ಟಿದ್ದ ಬ್ಯಾರಿಕೇಡ್ ಸಡಿಲಗೊಂಡು ಕಿತ್ತು ಬಂದ ಕಾರಣ ಉರುಳಿ ಬಿದ್ದರೂ ಅಪಾಯದಿಂದ ಪಾರಾಗಿದ್ದಾರೆ. ಅವರಿಬ್ಬರೊಂದಿಗೆ ಬೇರೆ ಕೆಲವರು ಉರುಳಿ ನೆಲಕ್ಕೆ ಬೀಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅದೃಷ್ಟವಶಾತ್ ಬಿದ್ದವರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೂಲಗಳ ಪ್ರಕಾರ ಗನ್ಮ್ಯಾನ್ ಕೂಡಲೇ ರಾಮರಾವ್ ಸೊಂಟ ಹಿಡಿದ ಕಾರಣ ಅವರು ನೆಲಕ್ಕೆ ಬಿದ್ದಿಲ್ಲ. ಬಿದ್ದಿದ್ದರೆ ವಾಹನದ ಅಡಿಗೆ ಹೋಗುತ್ತಿದ್ದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ