‘ಕೆಡಿ’ ಆಡಿಯೋ ರೈಟ್ಸ್ಗೆ ಕೊಟ್ಟಿದ್ದು 17 ಕೋಟಿ ರೂ.? ಇದು ನಿಜನಾ?
‘ಕೆಡಿ’ ಸಿನಿಮಾದ ಆಡಿಯೋ ಹಕ್ಕು 17.70 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನುವ ಮಾತಿದೆ. ಈ ಬಗ್ಗೆ ಆನಂದ್ ಆಡಿಯೋ ಶ್ಯಾಮ್ ಮಾತನಾಡಿದ್ದಾರೆ. ಅವರು ದೊಡ್ಡ ಮೊತ್ತ ಎಂದಷ್ಟೇ ಹೇಳಿದ್ದಾರೆ. ಅವರು ಎಷ್ಟು ಕೋಟಿ ನೀಡಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ.
‘ಕೆಡಿ’ ಸಿನಿಮಾದ (KD Movie) ಕೆಲಸಗಳು ಭರದಿಂದ ಸಾಗುತ್ತಿವೆ. ಇದೇ ಮೊದಲ ಬಾರಿಗೆ ನಿರ್ದೇಶಕ ಪ್ರೇಮ್ ಹಾಗೂ ಧ್ರುವ ಸರ್ಜಾ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಈ ವರ್ಷ ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ. ದರ್ಶನ್ ನಟನೆಯ ‘ಡೆವಿಲ್’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ಈ ಮಧ್ಯೆ ‘ಕೆಡಿ’ ಸಿನಿಮಾದ ಆಡಿಯೋ ಹಕ್ಕು 17.70 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನುವ ಮಾತಿದೆ. ಈ ಬಗ್ಗೆ ಆನಂದ್ ಆಡಿಯೋ ಶ್ಯಾಮ್ ಮಾತನಾಡಿದ್ದಾರೆ. ‘ರೇಟ್ ಬಗ್ಗೆ ಮಾತನಾಡಲ್ಲ. ಒಳ್ಳೆಯ ರೇಟ್ ಕೊಟ್ಟಿದ್ದೇವೆ. ಅವರ ಸಿನಿಮಾದಿಂದ ನಮ್ಮ ಸಂಸ್ಥೆಗೂ ಸಹಾಯ ಆಗುತ್ತದೆ. ಧ್ರುವ ಸರ್ಜಾ ಅವರಿಗೆ ಆನಂದ್ ಆಡಿಯೋ ಬಗ್ಗೆ ವಿಶೇಷ ಗೌರವ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.