ಮಹಾರಾಷ್ಟ್ರ: ಚಿನ್ನಾಭರಣ ಅಂಗಡಿ ಮೇಲೆ ಐಟಿ ದಾಳಿ, ₹ 26 ಕೋಟಿ ನಗದು ಮತ್ತು ₹ 90 ಕೋಟಿ ಮೌಲ್ಯದ ಆಸ್ತಿಪತ್ರ ಪತ್ತೆ!
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕೊನೆಗೊಂಡಿದೆ. ಅದರರ್ಥ, ಇದು ಮತದಾರರಿಗೆ ಹಂಚಲು ತಂದಿದ್ದ ಹಣ ಆಗಿರಲಾರದು. ಹಣದ ಮೂಲ ಮತ್ತು ಆಸ್ತಿಗಳ ಕಾಗದ ಪತ್ರ ಯಾರ ಹೆಸರಲ್ಲಿವೆ ಅನ್ನೋದು ಇನ್ನೂ ಬಹಿರಂಗಗೊಳ್ಳಬೇಕಿದೆ.
ನಾಸಿಕ್ (ಮಹಾರಾಷ್ಟ್ರ): ಖಚಿತ ಮಾಹಿತಿಯೊಂದನ್ನಾಧರಿಸಿ ನೆರೆರಾಜ್ಯ ಮಹಾರಾಷ್ಟ್ರದ ನಾಸಿಕ್ (Nasik) ನಗರದಲ್ಲಿರುವ ಚಿನ್ನಾಭರಣ ಅಂಗಡಿಯೊಂದರ (jewelry shop) ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಭಾರೀ ಪ್ರಮಾಣದ ನಗದು ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ನಾಸಿಕ್ ನಗರದಲ್ಲಿರುವ ಸುರಾನಾ ಜ್ಯೂಯೆಲ್ಲರ್ಸ್ (Surana Jewelers) ಅಂಗಡಿಯಿಂದ ₹ 26ಕೋಟಿ ನಗದು ಮತ್ತು ಸುಮಾರು ₹ 90 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಚೀಲಗಳಲ್ಲಿ ತುಂಬಿಸಿಟ್ಟಿದ್ದ ನೋಟುಗಳ ಕಂತೆಗಳನ್ನು ಅಧಿಕಾರಿಗಳು ಟೇಬಲ್ ಮೇಲೆ ಜೋಡಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕೊನೆಗೊಂಡಿದೆ. ಅದರರ್ಥ, ಇದು ಮತದಾರರಿಗೆ ಹಂಚಲು ತಂದಿದ್ದ ಹಣ ಆಗಿರಲಾರದು. ಹಣದ ಮೂಲ ಮತ್ತು ಆಸ್ತಿಗಳ ಕಾಗದ ಪತ್ರ ಯಾರ ಹೆಸರಲ್ಲಿವೆ ಅನ್ನೋದು ಇನ್ನೂ ಬಹಿರಂಗಗೊಳ್ಳಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನ ಓದಿ: ಆಗ್ರಾ: ಶೂ ವ್ಯಾಪಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, 40 ಕೋಟಿ ರೂ. ನಗದು ಪತ್ತೆ