ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲಿ ನಮಾಜ್​

ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲಿ ನಮಾಜ್​

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:May 27, 2024 | 11:10 AM

ಮಂಗಳೂರಿನ ಕಂಕನಾಡಿಯಲ್ಲಿ ಮುಸ್ಲಿಮರು ನಡು ರಸ್ತೆಯಲ್ಲಿ ನಮಾಜ್​ ಮಾಡಿದ್ದಾರೆ. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಮುಸ್ಲಿಮರು ನಡು ರಸ್ತೆಯಲ್ಲಿ ನಮಾಜ್​ ಮಾಡಿದ್ದನ್ನು ಸ್ಥಳೀಯರು ಮೊಬೈಲ್​ ಕ್ಯಾಮೆರಾದಲ್ಲಿ ಸೆರಿಹಿಡಿದ್ದಾರೆ.

ಮಂಗಳೂರು, ಮೇ 27: ಇತ್ತೀಚಿಗೆ ಬೆಂಗಳೂರಿನಲ್ಲಿ ಮುಸ್ಲಿಮರು (Muslims) ನಡುರಸ್ತೆಯಲ್ಲಿ ಕೂತು ನಮಾಜ್ (Namaz) ​ಮಾಡುತ್ತಿದ್ದ ಭಾವಚಿತ್ರ ಎಲ್ಲಡೆ ಹರದಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನ (Mangaluru) ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ನಮಾಜ್​ ಮಾಡಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.

ಕಂಕನಾಡಿಯಲ್ಲಿನ ಮಸೀದಿ ಮುಂದೆ ಇರುವ ರಸ್ತೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ನಡು ರಸ್ತೆಯಲ್ಲಿ ನಮಾಜ್​​ ಮಾಡುತ್ತಿದ್ದರಿಂದ ವಾಹನ ಸವಾರರು ಯೂಟರ್ನ್ ತೆಗೆದುಕೊಂಡು ಹೋಗಿದ್ದಾರೆ. ಕದ್ರಿ​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಸ್ಲಿಮರು ನಮಾಜ್​ ಮಾಡಿದನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದ್ದು, ಅಸಮದಾನ ವ್ಯಕ್ತವಾಗಿದೆ.

ಇದೇ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ವಾರ್ಡ್​ನಲ್ಲಿರುವ ಅತೀಕ್ ಮಸೀದಿ ಬಳಿ ಮುಸ್ಲಿಮರು ನಡು ರಸ್ತೆಯಲ್ಲಿ ನಮಾಜ್ ಮಾಡಿದ್ದರು. ಈ ಸಂಬಂಧ ಹಿಂದೂಪರ ಕಾರ್ಯಕರ್ತ ತೇಜಸ್​ ಗೌಡ ಅವರು ದೂರು ನೀಡಿದ್ದರು.

ಇದಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡು ರಸ್ತೆಯಲ್ಲಿ ನಮಾಜ್​ ಮಾಡುತ್ತಿದ್ದ ಮುಸ್ಲಿಮರಿಗೆ ಪೊಲೀಸ್​ ಅಧಿಕಾರಿ ಬೂಟ್​ ಕಾಲಿನಿಂದ ಒದ್ದು ಎಬ್ಬಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿತ್ತು. ಇದು ಪರ-ವಿರೋಧದ ಚರ್ಚೆಗೂ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: May 27, 2024 11:02 AM