ಮಂಗಳೂರು ಕಂಕನಾಡಿ ಮಸೀದಿ ಮುಂದೆ ರಸ್ತೆಯ ಮೇಲೆ ನಮಾಜ್ ಮಾಡಿದ ಯುವಕರು, ವಿಡಿಯೋ ವೈರಲ್!
ಜನರಲ್ಲಿ ಉದ್ಭವಿಸಿರುವ ಪ್ರಶ್ನೆಯೇನೆಂದರೆ, ಈ ಯುವಕರಿಗೆ ರಸ್ತೆಯ ಮೇಲೆ ನಮಾಜ್ ಮಾಡುವ ಅನಿವಾರ್ಯತೆ ಯಾಕೆ ಉಂಟಾಯಿತು? ಮಸೀದಿಯಲ್ಲಿ ಸ್ಥಳಾವಕಾಶವಿರಲಿಲ್ಲವೇ? ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಕನಾಡಿ ಮಸೀದಿ ಇದೆ. ಪೋಲೀಸರು ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು.
ಮಂಗಳೂರು: ಇದು ಪ್ರಾಯಶಃ ಕಳೆದ ಶುಕ್ರವಾರದ ವಿಡಿಯೋ ಇರಬಹುದು. ಶುಕ್ರವಾರ ಮಧ್ಯಾಹ್ನದ ನಮಾಜ್ ವೇಳೆ ಎಲ್ಲಾ ಮಸೀದಿಗಳಲ್ಲಿ (mosques) ಹೆಚ್ಚು ಜನ ಸೇರುತ್ತಾರೆ. ಮಸೀದಿಗಳೆಲ್ಲ ಭರ್ತಿಯಾಗಿರುವ ದೃಶ್ಯಗಳನ್ನು ನಾವು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಆದರೆ ಮುಸಲ್ಮಾನ ಸಮುದಾಯದವರು ಎಲ್ಲೂ ರಸ್ತೆಯ ಮೇಲೆ ನಮಾಜ್ ಮಾಡಲ್ಲ. ನಗರದ ಕಂಕನಾಡಿ ಮಸೀದಿ (masjid at Kankanadi) ಮುಂದಿನ ರಸ್ತೆಯಲ್ಲಿ ಒಂದಷ್ಟು ಯುವಕರು ಕಳೆದ ಶುಕ್ರವಾರ ನಮಾಜ್ ಮಾಡಿದ ದೃಶ್ಯ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿ ಈ ವಿಡಿಯೋ ವೈರಲ್ ಆಗಿದೆ. ಅವರು ನಮಾಜ್ ಮಾಡುತ್ತಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಾಹನಗಳಲ್ಲಿ ಬಂದ ಜನ ಯೂ-ಟರ್ನ್ ತೆಗೆದುಕೊಂಡು ವಾಪಸ್ಸು ಹೋಗುತ್ತಿರುವ ದೃಶ್ಯಗಳು ಸಹ ಕೆಮೆರಾದಲ್ಲಿ ಸೆರೆಯಾಗಿವೆ. ಜನರಲ್ಲಿ ಉದ್ಭವಿಸಿರುವ ಪ್ರಶ್ನೆಯೇನೆಂದರೆ, ಈ ಯುವಕರಿಗೆ ರಸ್ತೆಯ ಮೇಲೆ ನಮಾಜ್ ಮಾಡುವ ಅನಿವಾರ್ಯತೆ ಯಾಕೆ ಉಂಟಾಯಿತು? ಮಸೀದಿಯಲ್ಲಿ ಸ್ಥಳಾವಕಾಶವಿರಲಿಲ್ಲವೇ? ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಕನಾಡಿ ಮಸೀದಿ ಇದೆ. ಪೋಲೀಸರು ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನ ಓದಿ: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು