‘ಕೆಡಿ’ ಸಿನಿಮಾ ಎಷ್ಟು ದಿನ ಓಡುತ್ತೆ? ತಮ್ಮದೇ ಲೆಕ್ಕಾಚಾರ ತಿಳಿಸಿದ ನಿರ್ದೇಶಕ ಪ್ರೇಮ್
‘ಎಷ್ಟು ದಿನ ಸಿನಿಮಾ ಓಡುತ್ತೆ ಎಂಬುದು ಮುಖ್ಯವಲ್ಲ. ಎಷ್ಟು ಕಲೆಕ್ಷನ್ ಮಾಡಿತು ಎಂಬುದು ಮಾತ್ರ ನನಗೆ ಮುಖ್ಯ. ‘ಕೆಡಿ’ ಸಿನಿಮಾವನ್ನು 400 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದರೆ ಹಾಕಿದ ಬಂಡವಾಳ ವಾಪಸ್ ಬರಲ್ಲ. ದೇಶಾದ್ಯಂತ ಬಿಡುಗಡೆ ಮಾಡಿದರೆ ಮೂರೇ ದಿನದಲ್ಲಿ ದುಡ್ಡು ಬರುತ್ತದೆ’ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ನಟ ಧ್ರುವ ಸರ್ಜಾ (Dhruva Sarja) ಅಭಿನಯದ ‘ಕೆಡಿ’ ಸಿನಿಮಾ (KD Movie) ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಡಿಸೆಂಬರ್ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಹಾಗಾದರೆ ಈ ಚಿತ್ರ ಎಷ್ಟು ದಿನ ಓಡಬಹುದು ಎಂಬ ಕುತೂಹಲ ಕೆಲವರಲ್ಲಿ ಇದೆ. ಅದಕ್ಕೆ ನಿರ್ದೇಶಕ ಪ್ರೇಮ್ (Director Prem) ಉತ್ತರ ನೀಡಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಎಷ್ಟು ದಿನ ಎಂಬುದು ಮುಖ್ಯ ಅಲ್ಲ ಎಂದು ಅವರು ಹೇಳಿದ್ದಾರೆ. ‘ಮೊದಲು ನನ್ನನ್ನು ಹುಚ್ಚ ಎಂದಿದ್ದರು ಜನ. ಯಾಕೆಂದರೆ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದನ್ನು ನಾನು ‘ರಾಜ್: ದಿ ಶೋ ಮ್ಯಾನ್’ ಚಿತ್ರದಿಂದ ಶುರು ಮಾಡಿಕೊಂಡೆ. ಮಾರ್ಕೆಟಿಂಗ್ಹೇಗೆ ಎಂದರೆ ಒಂದೇ ಬಾರಿಗೆ ಜನ ಬಂದು ನೋಡಬೇಕು. ಮೊದಲು 100 ಚಿತ್ರಮಂದಿರದಲ್ಲಿ ಹಾಕಿ ಆಮೇಲೆ ಹಿಟ್ ಆದರೆ ಜನ ಬರುತ್ತಾರೆ ಅನ್ನೋದೆಲ್ಲ ಸುಳ್ಳು. ಯಾಕೆಂದರೆ ಮಾರನೇ ದಿನ ಪ್ರೇಕ್ಷಕರಿಗೆ ಇನ್ನೊಂದು ಸಿನಿಮಾ ಸಿಕ್ಕಿರುತ್ತದೆ. ಸಿನಿಮಾ ಕ್ರೇಜ್ ಇದ್ದರೆ ಒಂದು ವಾರದಲ್ಲೇ ಹೌಸ್ಫುಲ್ ಆಗತ್ತೆ. ಜಾಸ್ತಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ 100 ದಿನದಲ್ಲಿ ಬರುವ ದುಡ್ಡು 3 ದಿನದಲ್ಲಿ ಬರುತ್ತದೆ. ಇದನ್ನು ಶುರು ಮಾಡಿದ್ದೇ ನಾನು, ಬೈಯ್ಯಿಸಿಕೊಂಡವನು ಕೂಡ ನಾನು. ‘ಜೋಗಯ್ಯ’ ಸಿನಿಮಾವನ್ನು ಕೂಡ ಹಾಗೇ ಮಾಡಿದೆ. ಅದರಿಂದ ನನಗೆ ಲಾಭ ಆಯಿತು’ ಎಂದು ಪ್ರೇಮ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.