ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಪ್ರತಿನಿಧಿಗಳನ್ನು ಭೇಟಿಯಾಗುತ್ತಿರುತ್ತೇನೆ; ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲ್ಲ: ಎಸ್ ಟಿ ಸೋಮಶೇಖರ್

ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಪ್ರತಿನಿಧಿಗಳನ್ನು ಭೇಟಿಯಾಗುತ್ತಿರುತ್ತೇನೆ; ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲ್ಲ: ಎಸ್ ಟಿ ಸೋಮಶೇಖರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2023 | 1:05 PM

ಪಕ್ಷ ಬಿಡುವ ವದಂತಿಗಳು ಹಬ್ಬಿದ ಬಳಿಕ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಶಾಸಕ ಆರ್ ಅಶೋಕ ತನ್ನೊಂದಿಗೆ ಮಾತಾಡಿದ್ದಾರೆ ಎಂದು ಹೇಳಿದ ಅವರು ತಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದರು.

ಬೆಂಗಳೂರು: ಬಿಜೆಪಿಯ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಪುನಃ ಕಾಂಗ್ರೆಸ್ ಗೆ ವಾಪಸ್ಸಾಗುವ ವದಂತಿಗಳು ದಟ್ಟವಾಗುತ್ತಿದ್ದರೂ ಮಾಜಿ ಸಹಕಾರ ಸಚಿವ ನಿರಾಕರಣೆಯ ಮೋಡ್ ನಲ್ಲಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ, ಮೊದಲಿಗೆ ತಾನು ಯಾವುದೇ ಸಮುದಾಯದ ಪ್ರಬಲ ನಾಯಕನಲ್ಲ, ಯಶವಂತಪುರದ ಶಾಸಕನಾಗಿರುವ (Yeshwanthpur MLA) ತನಗೆ ಕ್ಷೇತ್ರದ ಅಭಿವೃದ್ಧಿಯೆಡೆ ಮಾತ್ರ ಗಮನವಿದೆ ಮತ್ತು ಆ ಕಾರಣಕ್ಕಾಗೇ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಭೇಟಿಯಾಗುತ್ತಿರುತ್ತೇನೆ ಎಂದರು. ಆದರೆ, ಈ ಭೇಟಿಗಳಿಗೆ ವಿಪರೀತ ಅರ್ಥ ಕಲ್ಪಿಸಿ ತಾನು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳುವುದು ಸರಿಯಲ್ಲ ಎಂದು ಸೋಮಶೇಖರ್ ಹೇಳಿದರು. ಪಕ್ಷ ಬಿಡುವ ವದಂತಿಗಳು ಹಬ್ಬಿದ ಬಳಿಕ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಶಾಸಕ ಆರ್ ಅಶೋಕ ತನ್ನೊಂದಿಗೆ ಮಾತಾಡಿದ್ದಾರೆ ಎಂದು ಹೇಳಿದ ಅವರು ತಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ