ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನ ನೀಲೇಶ್ವರದ ರೈಲ್ವೆ ರಸ್ತೆ ಮೇಲ್ಸೇತುವೆ ಬಳಿಯ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಪೂಮಾರುತನ್ ದೇವರ 'ವೆಲ್ಲಟ್ಟಂ' ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ತೆಯ್ಯಂ ಎಂಬುದು ಕೇರಳದ ಒಂದು ಧಾರ್ಮಿಕ ವಿಧಿವಿಧಾನದ ರೂಪ. ಇದರದಲ್ಲಿ ಪ್ರದರ್ಶಕರು ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಗುರಾಣಿಯನ್ನು ಹಿಡಿದಿರುತ್ತಾರೆ. ಈ ಪ್ರದರ್ಶನವನ್ನು ಗುರಾಣಿಯನ್ನು ತಿರುಗಿಸುವುದು ಮತ್ತು ಕತ್ತಿಯನ್ನು ಬೀಸುವ ಬಿರುಸಾದ ಚಲನೆಗಳ ಮೂಲಕ ಮಾಡಲಾಗುತ್ತದೆ.
ಕಾಸರಗೋಡು, ಡಿಸೆಂಬರ್ 15: ಕಾಸರಗೋಡಿನ ನೀಲೇಶ್ವರದಲ್ಲಿ ತೆಯ್ಯಂ ಪ್ರದರ್ಶಕ ಮರದ ಗುರಾಣಿಯಿಂದ ತಲೆಗೆ ಹೊಡೆದ ಪರಿಣಾಮವಾಗಿ ಯುವಕ ಕುಸಿದು ಬಿದ್ದ ಘಟನೆ ನಡೆದಿದೆ. ನೀಲೇಶ್ವರದ ರೈಲ್ವೆ ರಸ್ತೆ ಮೇಲ್ಸೇತುವೆ ಬಳಿಯ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಪೂಮಾರುತನ್ ದೇವರ ‘ವೆಲ್ಲಟ್ಟಂ’ ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ತೆಯ್ಯಂ ಎಂಬುದು ಕೇರಳದ (Kerala) ಒಂದು ಧಾರ್ಮಿಕ ಹಾಗೂ ಜಾನಪದ ಮಿಶ್ರಣವಾದ ನೃತ್ಯ ಪ್ರಕಾರ. ಇದರಲ್ಲಿ ಪ್ರದರ್ಶಕರು ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಗುರಾಣಿಯನ್ನು ಹಿಡಿದಿರುತ್ತಾರೆ. ಈ ಪ್ರದರ್ಶನವನ್ನು ಗುರಾಣಿಯನ್ನು ತಿರುಗಿಸುವುದು ಮತ್ತು ಕತ್ತಿಯನ್ನು ಬೀಸುವ ಬಿರುಸಾದ ಚಲನೆಗಳ ಮೂಲಕ ಮಾಡಲಾಗುತ್ತದೆ. ಈ ವೇಳೆ ತೆಯ್ಯಂ ಪ್ರದರ್ಶಕ ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಒಬ್ಬ ಹುಡುಗನಿಗೆ ಗುರಾಣಿಯಿಂದ ಹೊಡೆದಿದ್ದಾರೆ. ಇದರಿಂದ ಆತ ತಕ್ಷಣವೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಜೀವಕ್ಕೇನೂ ತೊಂದರೆಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ