ಚಂದನವನದಲ್ಲಿ ಹತ್ತು ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಮೇ 24ರಂದು ‘ಚಂದನವನ ಅಂದು ಇಂದು ಮುಂದು’ ಎಂಬ ವಿಚಾರ ಸಂಕಿರಣವನ್ನು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಕನ್ನಡ ಚಿತ್ರರಂಗಕ್ಕೆ (Kannada Film Industry) ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವತಿಯಿಂದ ಮೇ 24ರಂದು ‘ಚಂದನವನ ಅಂದು ಇಂದು ಮುಂದು’ ಎಂಬ ವಿಚಾರ ಸಂಕಿರಣವನ್ನು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದೆ. ಆ ಬಗ್ಗೆ ಮಂಡಳಿ ಅಧ್ಯಕ್ಷೆ ಜಯಮಾಲಾ (Jayamala) ಅವರು ಮಾಹಿತಿ ನೀಡಿದ್ದಾರೆ. ‘ಸಬ್ಸಿಡಿ, ಪ್ರಶಸ್ತಿ, ಪೈರಸಿ, ಒಟಿಟಿ, ಕಿರುತೆರೆ ಹಕ್ಕು ಮಾರಾಟ, ಚಿತ್ರಮಂದಿರಗಳು ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇವೆ. ಪ್ಯಾನ್ ಇಂಡಿಯಾ, ಎಐ ಕುರಿತ ಸಮಸ್ಯೆಗಳು ಸಹ ಎದುರಾಗಿವೆ. ಹಳೇ ನಿರ್ಮಾಪಕರು ಸಿನಿಮಾ ಮಾಡುತ್ತಿಲ್ಲ. ಆ ಬಗ್ಗೆ ಚಿಂತನ ಮಂಥನ ಆಗಬೇಕಿದೆ. ಹಾಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಜಯಮಾಲಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
