ಬೃಹತ್ ಹಾರ ಸ್ವೀಕರಿಸಲು ನಿರಾಕರಿಸಿದ ಕಿಚ್ಚ ಸುದೀಪ್
‘ಪೆಪೆ’ ಸಿನಿಮಾ ಟ್ರೇಲರ್ ರಿಲೀಸ್ ಈವೆಂಟ್ಗೆ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರಿಗೆ ಬೃಹತ್ ಗುಲಾಬಿ ಹಾರ ಹಾಕಲು ತಂಡ ಮುಂದಾಯಿತು. ಆದರೆ, ಸುದೀಪ್ ಅವರು ಇದನ್ನು ಸ್ವೀಕರಿಸಿಲ್ಲ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಿಚ್ಚ ಸುದೀಪ್ ಅವರು ಗೌರವಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿವಿ ಮುಂದಾಗಿತ್ತು. ಆದರೆ, ಇದನ್ನು ಅವರು ನಿರಾಕರಿಸಿದ್ದರು. ‘ಪೆಪೆ’ ಸಿನಿಮಾ ಟ್ರೇಲರ್ ರಿಲೀಸ್ ಈವೆಂಟ್ಗೆ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರಿಗೆ ಬೃಹತ್ ಗುಲಾಬಿ ಹಾರ ಹಾಕಲು ತಂಡ ಮುಂದಾಯಿತು. ಆದರೆ, ಸುದೀಪ್ ಅವರು ಇದನ್ನು ಸ್ವೀಕರಿಸಿಲ್ಲ. ಈ ರೀತಿಯ ಆಡಂಬರವನ್ನು ಅವರು ಎಂದಿಗೂ ಇಷ್ಟಪಡುವುದಿಲ್ಲ. ಈ ರೀತಿ ಹಣವನ್ನು ಖರ್ಚು ಮಾಡುವ ಬದಲು ಅದನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಲಿ ಎಂಬುದು ಅವರ ಆಶಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 19, 2024 10:33 AM
Latest Videos