ಸೈಕಲ್​ನಿಂದ ಬಿದ್ದ ಬಾಲಕಿ ಮೇಲೆ ಕಾರು ಹತ್ತಿಸಿದ ಚಾಲಕ, ಸ್ಥಳದಲ್ಲೇ ಸಾವು

ಸೈಕಲ್​ನಿಂದ ಬಿದ್ದ ಬಾಲಕಿ ಮೇಲೆ ಕಾರು ಹತ್ತಿಸಿದ ಚಾಲಕ, ಸ್ಥಳದಲ್ಲೇ ಸಾವು

ನಯನಾ ರಾಜೀವ್
|

Updated on: Aug 19, 2024 | 9:38 AM

ಸೈಕಲ್​ನಿಂದ ಬಿದ್ದ ಬಾಲಕಿ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗುಜರಾತ್‌ನ ಮೆಹ್ಸಾನಾದ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ನಾಲ್ಕು ವರ್ಷದ ಬಾಲಕಿ ಸೈಕಲ್ ಓಡಿಸುವಾಗ ಎದುರಿಗೆ ಬಂದ ಕಾರನ್ನು ನೋಡಿ ಕೆಳಗಿಳಿಯಲು ಹೋಗಿ ಸಮತೋಲನವನ್ನು ಕಳೆದುಕೊಂಡು ತನ್ನ ಸೈಕಲ್‌ನಿಂದ ಕೆಳಗೆ ಬಿದ್ದಿದ್ದಾಳೆ.

ಬಾಲಕಿ ದಿಶಾ ಪಟೇಲ್ ಸ್ಪರ್ಶ್ ವಿಲ್ಲಾ ಸೊಸೈಟಿಯ ಕಾಂಪೌಂಡ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರನ್ನು ನೋಡಿದ ಬಾಲಕಿ ತನ್ನ ಸಮತೋಲನವನ್ನು ಕಳೆದುಕೊಂಡಿದ್ದರಿಂದ ಸೈಕಲ್‌ನಿಂದ ಬೀಳುತ್ತಾಳೆ, ಆದರೆ ಏಳುವಷ್ಟರಲ್ಲಿ ಕಾರು ಆಕೆಯ ಮೇಲೆ ಹರಿದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಸಿಸಿಟಿವಿ ತೋರಿಸುತ್ತದೆ.

ಚಾಲಕ ಬಾಲಕಿ ಮೇಲೆ ಕಾರು ಹರಿದ ಬಳಿಕ ಕಾರು ನಿಲ್ಲಿಸಿ ಪರೀಕ್ಷಿಸಲು ಕಾರಿನಿಂದ ಕೆಳಗಿಳಿದಿರುವುದನ್ನು ಕಾಣಬಹುದು. . ಮಗಳ ಸಾವಿನಿಂದ ಬಾಲಕಿಯ ಕುಟುಂಬ ಆಘಾತಕ್ಕೊಳಗಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ ನಂತರ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ