ವಿನಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಪೆಪೆ’ ಸಿನಿಮಾದ ಟ್ರೈಲರ್ ಕಾರ್ಯಕ್ರಮ ನಗರದಲ್ಲಿ ಇಂದು (ಆಗಸ್ಟ್ 18) ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಆಗಮಿಸಿದ್ದರು. ದೊಡ್ಮನೆಯೊಂದಿಗೆ ಆಪ್ತ ಬಂಧ ಹೊಂದಿರುವ ಕಿಚ್ಚ ಸುದೀಪ್, ದೊಡ್ಮನೆಯ ಕುಡಿಗಳಿಗೆ ಶುಭಾಶಯ ಕೋರುವ ಜೊತೆಗೆ ಸಿನಿಮಾ ರಂಗದ ಬಗ್ಗೆ, ಸಿನಿಮಾ ರಂಗದಲ್ಲಿ ಮಿಂಚಲು ಬರುತ್ತಿರುವ ಹೊಸಬರಿಗೆ ಕೆಲವು ಕಿವಿ ಮಾತುಗಳನ್ನು ಸಹ ಹೇಳಿದರು. ಸಿನಿಮಾ ಎಂಬುದು ಆಲದ ಮರ ಎಂದ ಕಿಚ್ಚ ಸುದೀಪ್, ಸೋಲಲು ಹೆದರಬೇಡಿ, ಸೋಲುವುದೇ ಗೆಲ್ಲುವುದಕ್ಕೋಸ್ಕರ ಎಂಬ ಸ್ಪೂರ್ತಿಯ ಮಾತುಗಳನ್ನು ಸಹ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ