ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು

ರೇಣುಕಾ ಸ್ವಾಮಿ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಕಿಚ್ಚ ಸುದೀಪ್​ ಒತ್ತಾಯಿಸಿದ್ದಾರೆ. ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಕೊಲೆ ಪ್ರಕರಣದಲ್ಲಿ ಪವಿತ್ರಾ ಎ1, ದರ್ಶನ್​ ಎ2 ಆಗಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಸುದೀಪ್​ ಹೇಳಿದ್ದಾರೆ. ಬಿಗ್​ ಬಾಸ್​ ಮಾಜಿ ಸ್ಪರ್ಧಿ ಕಾರ್ತಿಕ್​ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಸುದ್ದಿಗೋಷ್ಠಿಗೆ ಸುದೀಪ್​ ಅವರು ಅತಿಥಿಯಾಗಿ ಬಂದಿದ್ದರು. ಈ ವೇಳೆ ದರ್ಶನ್​ ಪ್ರಕರಣದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸುದೀಪ್​ ಉತ್ತರಿಸಿದರು.

ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
|

Updated on: Jun 16, 2024 | 8:15 PM

ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಹತ್ಯೆಯ ಬಗ್ಗೆ ನಟ ಕಿಚ್ಚ ಸುದೀಪ್​ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕೇಸ್​ನಲ್ಲಿ ನಟ ದರ್ಶನ್ (Darshan)​, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ತನಿಖೆ ನಡೆಯುತ್ತಿರುವ ರೀತಿಯ ಬಗ್ಗೆ ಸುದೀಪ್​ ಅವರು ಮಾತನಾಡಿದ್ದಾರೆ. ಪೊಲೀಸರ ಕೆಲಸಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ರೇಣುಕಾ ಸ್ವಾಮಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸುದೀಪ್​ ಒತ್ತಾಯಿಸಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅವರು ನಟನಾಗಿ ಮಾತ್ರವಲ್ಲದೇ ಬಿಗ್​ ಬಾಸ್​ ನಿರೂಪಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಶೋ ಮುಗಿದ ನಂತರವೂ ಅವರು ಬಿಗ್​ ಬಾಸ್​ ಸ್ಪರ್ಧಿಗಳಿಗೆ ಬೆಂಬಲ ನೀಡುತ್ತಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ವಿಜೇತ ಕಾರ್ತಿಕ್​ ಮಹೇಶ್​ ನಟನೆಯ ಹೊಸ ಸಿನಿಮಾಗೆ ಶುಭ ಕೋರಲು ಕಿಚ್ಚ ಸುದೀಪ್​ ಇಂದು (ಜೂನ್​ 16) ಮುಖ್ಯ ಅತಿಥಿಯಾಗಿ ಬಂದಿದ್ದರು. ‘ರಾಮರಸ’ ಸಿನಿಮಾದ ಸುದ್ದಿಗೋಷ್ಠಿ ಬಳಿಕ ಸುದೀಪ್​ ಅವರು ದರ್ಶನ್​ ಕುರಿತು ಮಾತನಾಡಿದರು. ಅಲ್ಲದೇ, ಚಿತ್ರರಂಗದ ಸಮಸ್ಯೆಗಳ ಬಗ್ಗೆಯೂ ತಮ್ಮ ಅನಿಸಿಕೆ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ