ವೋಟಿಂಗ್ ಆಧಾರದ ಮೇಲೆ ಫಿನಾಲೆ ಟಿಕೆಟ್ ಕೊಟ್ಟಿದ್ದೇಕೆ? ಕಿಚ್ಚನ ನಿಲುವೇನು?
‘ಟಾಸ್ಕ್ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಲಿದೆ’ ಎಂದು ಬಿಗ್ ಬಾಸ್ ಸ್ಪಷ್ಟವಾಗಿ ಹೇಳಿದ್ದರು. ಬಹುಶಃ ಇದೇ ವಿಚಾರ ಇಟ್ಟುಕೊಂಡು ಸುದೀಪ್ ಮಾತನಾಡುವ ಸಾಧ್ಯತೆ ಇದೆ.
‘ಬಿಗ್ ಬಾಸ್’ ಮೇಲೆ ಒಂದು ದೊಡ್ಡ ಆರೋಪ ಬಂದಿದೆ. ಅತಿ ಹೆಚ್ಚು ಅಂಕ ಪಡೆದವರಿಗೆ ಫಿನಾಲೆ ಟಿಕೆಟ್ ಕೊಡುವ ಬದಲು ವೋಟಿಂಗ್ ಆಧಾರದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು. ವೀಕೆಂಡ್ ಎಪಿಸೋಡ್ನಲ್ಲಿ ಈ ಬಗ್ಗೆ ಸುದೀಪ್ ಚರ್ಚೆ ಮಾಡಲು ಬಂದಿದ್ದಾರೆ. ‘ಟಾಸ್ಕ್ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಲಿದೆ’ ಎಂದು ಬಿಗ್ ಬಾಸ್ ಸ್ಪಷ್ಟವಾಗಿ ಹೇಳಿದ್ದರು. ಬಹುಶಃ ಇದೇ ವಿಚಾರ ಇಟ್ಟುಕೊಂಡು ಸುದೀಪ್ (Sudeep) ಮಾತನಾಡುವ ಸಾಧ್ಯತೆ ಇದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಇಂದು (ಜನವರಿ 13) ಈ ಎಪಿಸೋಡ್ ಪ್ರಸಾರ ಕಾಣುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ