Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಮರ್ಡರ್ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಹಂತಕರು ಅಡ್ಡಗಟ್ಟಿದ ಬೈಕ್ ಸೀಜರ್ ಗೆ ಬಹಳ ಕೂಲಾಗಿ ಕೊಲೆ ಮಾಡಿ ಬರ್ತಾ ಇದ್ದೀವಿ ಅನ್ನುತ್ತಾರೆ!

ಮಂಡ್ಯ: ಮರ್ಡರ್ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಹಂತಕರು ಅಡ್ಡಗಟ್ಟಿದ ಬೈಕ್ ಸೀಜರ್ ಗೆ ಬಹಳ ಕೂಲಾಗಿ ಕೊಲೆ ಮಾಡಿ ಬರ್ತಾ ಇದ್ದೀವಿ ಅನ್ನುತ್ತಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 11:22 AM

ಹಾಗಾಗಿ ಬ್ಯಾಂಕಿನ ಬೈಕ್ ಸೀಸರ್ ಗಳು ವಾಹನವನ್ನು ಆಡ್ಡಗಟ್ಟಿದಾಗ ಹಂತಕರು ತಾವು ಕೊಲೆ ಮಾಡಿ ಪರಾರಿಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸುತ್ತಿದ್ದಾರೆ. ಹಂತಕರು ಬಹಳ ಕೂಲಾಗಿ ‘ಮರ್ಡರ್ ಮಾಡಿ ಬರ್ತಾ ಇದ್ದೀವಿ’ ಅಂತ ಹೇಳುತ್ತಾರೆ.

Mandya:  ಈ ಯುವಕರ ನಡುವೆ ನಡೆಯುತ್ತಿರುವ ಸಂಭಾಷಣೆ (conversation) ಮೇಲು ನೋಟಕ್ಕೆ ಸಾಮಾನ್ಯ ಅನಿಸಿದರೂ ಇವರಲ್ಲಿ ಒಂದು ಗುಂಪು ಮಂಡ್ಯದ ಕೆ ಅರ್ ಪೇಟೆಯಲ್ಲಿ ಅರುಣ್ (Arun) ಹೆಸರಿನ ರೌಡಿಶೀಟರ್ ನನ್ನು (rowdy sheeter) ಕೊಲೆ ಮಾಡಿ ಕೆಆರ್ ನಗರಕ್ಕೆ ಹೊರಟಿದೆ. ಆದರೆ ಅವರು ಸಾಲದ ಕಂತುಗಳನ್ನು ಕಟ್ಟದ್ದಕ್ಕೆ ಜಪ್ತಿಯಾಗಬೇಕಿದ್ದ ದ್ವಿಚಕ್ರವಾಹನವನ್ನು ಬಳಸುತ್ತಿದ್ದರು. ಹಾಗಾಗಿ ಬ್ಯಾಂಕಿನ ಬೈಕ್ ಸೀಸರ್ ಗಳು ವಾಹನವನ್ನು ಆಡ್ಡಗಟ್ಟಿದಾಗ ಹಂತಕರು ತಾವು ಕೊಲೆ ಮಾಡಿ ಪರಾರಿಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸುತ್ತಿದ್ದಾರೆ. ಹಂತಕರು ಬಹಳ ಕೂಲಾಗಿ ‘ಮರ್ಡರ್ ಮಾಡಿ ಬರ್ತಾ ಇದ್ದೀವಿ’ ಅಂತ ಹೇಳುತ್ತಾರೆ. ಬೈಕ್ ಸೀಸರ್ ಮತ್ತು ಹಂತಕರ ನಡುವೆ ನಡೆದ ಸಂಭಾಷಣೆ ಟಿವಿ9ಗೆ ಲಭ್ಯವಾಗಿದೆ. ಅವರ ಬೈಕ್ ಮೇಲಿರುವ ಗೋಣಿ ಚೀಲದಲ್ಲಿ ಮಾರಕಾಸ್ತ್ರಗಳಿವೆಯಂತೆ!

ಇದನ್ನೂ ಓದಿ:  Anchor Anushree: ಆ್ಯಂಕರ್​ ಅನುಶ್ರೀಗೆ ಜಾಕೆಟ್​ ಗಿಫ್ಟ್​ ನೀಡಿ, ಕೈಯಾರೆ ತೊಡಿಸಿದ ಶಿವಣ್ಣ; ವಿಡಿಯೋ ವೈರಲ್​