Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪು ಸರ್​ ನೋಡಿ ನಾನು ನಟನಾದೆ’; ಹೆಮ್ಮೆಯಿಂದ ಹೇಳಿಕೊಂಡ ಕಿರೀಟಿ

‘ಅಪ್ಪು ಸರ್​ ನೋಡಿ ನಾನು ನಟನಾದೆ’; ಹೆಮ್ಮೆಯಿಂದ ಹೇಳಿಕೊಂಡ ಕಿರೀಟಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 05, 2022 | 9:15 PM

ಪುನೀತ್​ ಅವರನ್ನು ಕಂಡರೆ ಕಿರೀಟಿಗೆ ಎಲ್ಲಿಲ್ಲದ ಗೌರವ ಹಾಗೂ ಪ್ರೀತಿ. ಈ ಬಗ್ಗೆ ಅನೇಕ ಬಾರಿ ಅವರು ಹೇಳಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ಲಾಂಚ್​ ಮಾಡುವ ಕಾರ್ಯಕ್ರಮದಲ್ಲೂ ಈ ಬಗ್ಗೆ ಹೇಳಿಕೊಂಡಿದ್ದಾರೆ ಕಿರೀಟಿ. ‘

ಮಾಜಿ ಸಚಿವ ಜನಾರ್ದನ ​ರೆಡ್ಡಿ (Janardhan Reddy) ಮಗ ಕಿರೀಟಿ ರೆಡ್ಡಿ (Kireeti Reddy) ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ನಿರ್ಮಾಣದ ಸಿನಿಮಾದಲ್ಲಿ ಕಿರೀಟಿ ನಟಿಸುತ್ತಿದ್ದಾರೆ. ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಚಿತ್ರದ ಮೂಲಕ ಕಿರೀಟಿ ಅವರು ನಾಯಕನಾಗಿ ಪರಿಚಯಗೊಳ್ಳುತ್ತಿದ್ದಾರೆ. ಪುನೀತ್​ ಅವರನ್ನು ಕಂಡರೆ ಕಿರೀಟಿಗೆ ಎಲ್ಲಿಲ್ಲದ ಗೌರವ ಹಾಗೂ ಪ್ರೀತಿ. ಈ ಬಗ್ಗೆ ಅನೇಕ ಬಾರಿ ಅವರು ಹೇಳಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ಲಾಂಚ್​ ಮಾಡುವ ಕಾರ್ಯಕ್ರಮದಲ್ಲೂ ಈ ಬಗ್ಗೆ ಹೇಳಿಕೊಂಡಿದ್ದಾರೆ ಕಿರೀಟಿ. ‘ಅಪ್ಪು ಸರ್​ ನೋಡಿ ನಾನು ಹೀರೋ ಆದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದರ ಜತೆಗೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್​ ರಾಜ್​ಕುಮಾರ್​: ವಂಶಿಕಾ ಸೂಪರ್​ ಮಾತು 

ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಜೇಮ್ಸ್’​; ಪುನೀತ್​ ಸಿನಿಮಾಗೆ ಯಾವ ಪ್ರಮಾಣಪತ್ರ?

Published on: Mar 05, 2022 09:14 PM