ಶಿವಮೊಗ್ಗನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸೋರಿ ಕಿಚನ್ ಗೆ ಹೊತ್ತಿಕೊಂಡಿತು ಬೆಂಕಿ, ನೆರೆಹೊರೆಯವರ ಸಹಾಯದಿಂದ ತಪ್ಪಿತು ಅನಾಹುತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 24, 2022 | 6:39 PM

ಅಷ್ಟರಲ್ಲಿ ಯಾರೋ ಅಗ್ನಿ ಶಾಮಕ ದಳ ಕಚೇರಿಗೆ ಫೋನ್ ಮಾಡಿದ್ದಾರೆ. ಅವರು ಅಲ್ಲಿಗೆ ಆಗಮಿಸುವಷ್ಟರಲ್ಲಿ ನೆರೆಮನೆಗಳ ಕೆಲ ನಿವಾಸಿಗಳು ಮರಳು ಮತ್ತು ಹಸಿ ಗೋಣಿ ಚೀಲಗಳ ಮೂಲಕ ಬೆಂಕಿ ನಂದಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಅಗಮಿಸುವ ಮೊದಲೇ ಬೆಂಕಿ ನಂದಿ ಹೋಗಿದೆ.

Shivamogga:  ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಹೊಂದಿದ ಒಲೆ ಉರಿಯುವಾಗ ಸ್ವಲ್ವವೇ ಎಚ್ಚರ ತಪ್ಪಿದರೆ ಅನಾಹುತಗಳು ತಪ್ಪಿದಲ್ಲ. ನಮಗೆ ಶಿವಮೊಗ್ಗದಿಂದ (Shivamogga) ಒಂದು ವಿಡಿಯೋ ಲಭ್ಯವಾಗಿದೆ. ನಗರದ ಶಾಂತಿಪುರದ ನಿವಾಸಿಯಾಗಿರುವ ಶ್ರೀಧರ್ (Sridhar) ಎನ್ನುವವರ ಮನೆಯಲ್ಲಿ ಅಂಥದೊಂದು ಬೆಂಕಿ ಅನಾಹುತ (fire mishap) ಸೋಮವಾರ ಸಂಭವಿಸಿದೆ. ಗ್ಯಾಸ್ ಸ್ಟೋವ್ ಉರಿಯುವ ಸಂದರ್ಭದಲ್ಲಿ ಸಿಲಿಂಡರ್ ನಿಂದ ಗ್ಯಾಸ್ ಸೋರಲು ಶುರುವಾಗಿದೆ. ಮನೆಯಲ್ಲಿನ ಮಹಿಳೆಯರು ಕಿಚನ್ ನಿಂದ ಹೊರಗಿದ್ದರು ಅಂತ ಕಾಣುತ್ತೆ. ಸುಟ್ಟ ವಾಸನೆ ಮೂಗಿಗೆ ಬಡಿಯಲಾರಂಭಿಸಿದ ನಂತರ ಅವರು ಕಿಚನ್ ಬಾಗಿಲ ಕಡೆ ಓಡಿದಾಗ ಗ್ಯಾಸ್ ಸೋರಿ ಸ್ಟೋವ್ ಹತ್ತಿರದ ಸಾಮಾನುಗಳಿಗೆ ಬೆಂಕಿ ತಾಕಿದೆ. ಅವರು ಗಾಬರಿಯಿಂದ ಕೂಗಾಡಲು ಪ್ರಾರಂಭಿಸಿದ ಬಳಿಕ ನೆರೆಹೊರೆಯವರೆಲ್ಲ ಅಲ್ಲಿಗೆ ಧಾವಿಸಿದ್ದಾರೆ.

ಅಷ್ಟರಲ್ಲಿ ಯಾರೋ ಅಗ್ನಿ ಶಾಮಕ ದಳ ಕಚೇರಿಗೆ ಫೋನ್ ಮಾಡಿದ್ದಾರೆ. ಅವರು ಅಲ್ಲಿಗೆ ಆಗಮಿಸುವಷ್ಟರಲ್ಲಿ ನೆರೆಮನೆಗಳ ಕೆಲ ನಿವಾಸಿಗಳು ಮರಳು ಮತ್ತು ಹಸಿ ಗೋಣಿ ಚೀಲಗಳ ಮೂಲಕ ಬೆಂಕಿ ನಂದಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಅಗಮಿಸುವ ಮೊದಲೇ ಬೆಂಕಿ ನಂದಿ ಹೋಗಿದೆ.

ಬೆಂಕಿಯಿಂದ ಸುಟ್ಟು ಕರಕಲಾಗಿರುವ ವಸ್ತುಗಳನ್ನು ನೀವು ನೋಡಬಹುದು. ಸುಟ್ಟು ಬೂದಿಯಾಗಿರುವ ವಸ್ತುಗಳನ್ನು ಫೈರ್ ಬ್ರಿಗೇಡ್ ಸಿಬ್ಬಂದಿ ಎತ್ತಿ ಹೊರಹಾಕುತ್ತಿದ್ದಾರೆ. ಮನೆ ತುಂಬಾ ಹೊಗೆ ಆವರಿಸಿರುವುದರಿಂದ ಮನೆಯಲ್ಲಿದ್ದವರನ್ನು ಹೊರಗೆ ನಿಲ್ಲುವಂತೆ ಹೇಳಲಾಗಿದೆ. ನೆರೆಹೊರೆಯವರು ಕಾಮನ್ ಸೆನ್ಸ್ ಬಳಸಿ ಬೆಂಕಿ ನಂದಿಸದೆ ಹೋಗಿದ್ದರೆ ಹೆಚ್ಚಿನ ಅನಾಹುತ ಆಗಬಹುದಿತ್ತು ಎಂದು ಮನೆಯ ಯಜಮಾನ ಶ್ರೀಧರ್ ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.