ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ!

ಹೆಚ್ಚುವರಿ ಡಿಸಿಎಂಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಡೋದನ್ನು ನಿಲ್ಲಿಸು ಅಂತ ಸಿದ್ದರಾಮಯ್ಯ ಅವರು ರಾಜಣ್ಣಗೆ ಪೋನಲ್ಲಿ ಹೇಳಿದ್ದಾರೆ ಅಂತ ಎರಡು ದಿನಗಳ ಹಿಂದೆ ಸುದ್ದಿ ತೇಲಿಬಂದಿತ್ತು. ಆದರೆ, ಇವತ್ತು ಇವರಿಬ್ಬರ ನಡುವೆ ಸಂವಾದ ನೋಡಿದರೆ ಮುಖ್ಯಮಂತ್ರಿಯವರು ಹಾಗೆ ಹೇಳಿರಬಹುದಾ ಅಂತ ಸಂಶಯ ಹುಟ್ಟುತ್ತೆ!

ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ!
|

Updated on: Jul 02, 2024 | 2:50 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಮಾತಾಡೋದೇ ಹಾಗೆ, ಆತ್ಮೀಯತೆಯಿಂದ ಹೋಗಯ್ಯ, ಬಾರಯ್ಯ , ಎಲ್ಲಯ್ಯ ಇದ್ದೀಯಾ? ಅಂತೆಲ್ಲ ಅವರು ಮಾತಾಡುತ್ತಿರುತ್ತಾರೆ. ಇವತ್ತು ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ಸಂಪುಟದ ಕೆಲ ಸಚಿವರು ಅವರೊಂದಿಗಿದ್ದರು. ಆದರೆ ಮಾತಾಡಲು ಅಣಿಯಾದಾಗ ಕೆಲವರು ಮಿಸ್ಸಿಂಗ್ ಅನ್ನೋದು ಅವರ ಗಮನಕ್ಕೆ ಬಂತು. ಕೂಡಲೇ ಅವರು ‘ಏಯ್ ಭೀಮ ಎಲ್ಲಿದ್ದೀಯ?’ ಅನ್ನುತ್ತಾರೆ. ಭೀಮ ಯಾರು ಅಂತ ನಮಗಂತೂ ಗೊತ್ತಾಗಲಿಲ್ಲ. ಆದರೆ ಸದಾ ಸುದ್ದಿಯಲ್ಲಿರುವ ಸಹಕಾರ ಸಚಿವ ಮತ್ತು ಇವತ್ತು ಕೋಟು ಧರಿಸಿದ್ದ ಕೆಎನ್ ರಾಜಣ್ಣ ಓಡೋಡಿ ಸಿದ್ದರಾಮಯ್ಯರಲ್ಲಿಗೆ ಬರುತ್ತಾರೆ. ಅವರೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಅವಸರದಲ್ಲಿ ಬರುತ್ತಾರೆ. ಪ್ರಾಯಶಃ ಸಿದ್ದರಾಮಯ್ಯ ಕರೆದ ಭೀಮ ಅವರೇ ಇರಬಹುದು. ರಾಜಣ್ಣರನ್ನು ಕೋಟ್ ಧರಿಸಿರುವುದನ್ನು ನೋಡಿದ ಸಿದ್ದರಾಮಯ್ಯ ಗೇಲಿ ಮಾಡುತ್ತಾ ‘ಏನಯ್ಯಾ ಇವತ್ತು ಕೋಟು?’ ಅನ್ನುತ್ತಾರೆ. ಅದಕ್ಕೆ ರಾಜಣ್ಣ, ‘ಇವತ್ತೆಲ್ಲ ನಿಮ್ಮ ಜೊತೆ ಇರ್ಬೇಕಲ್ಲಾ ಸರ್ ಅದಕ್ಕೆ ಕೋಟು’ ಅನ್ನುತ್ತಾರೆ. ‘ಅದು ಸರಿ, ನೀನು ಲಾಯರ್ ಅಗಿದ್ದು ಯಾವಾಗ?’ ಅಂತ ಸಿದ್ದರಾಮಯ್ಯ ಕೇಳಿದ್ದಕ್ಕೆ ರಾಜಣ್ಣ, ‘ಲಾಯರ್ ಗೀಯರ್ ಎಂಥದ್ದೂ ಇಲ್ಲ ಸರ್, ಪ್ಯಾರಿಸಲ್ಲಿ ತಗೊಂಡಿದ್ದು’ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್​​ ನೀಡಿದ್ದಾನೆ; ಸಿದ್ದರಾಮಯ್ಯ

Follow us
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು
ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್
ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ