ವಿಧಾನಸಭೆಯ ಮೇಲ್ಮನೆ ಮತ್ತು ಕೆಳಮನೆಗೆ ಬಿಜೆಪಿ ಯೋಗ್ಯ ಪ್ರತಿಪಕ್ಷ ನಾಯಕರನ್ನು ಅಯ್ಕೆ ಮಾಡಲಿ: ತೇಜಸ್ವಿನಿ ಗೌಡ
ಮಾಧ್ಯಮಗಳೊಂದಿಗೆ ಮಾತಾಡುತ್ತಿರುವಾಗ ತೇಜಸ್ವಿನಿ ತಾವು ರಾಜ್ಯ ಸರ್ಕಾರದ ಬಗ್ಗೆ ಮಾತಾಡುತ್ತಿರುವುದೋ ಅಥವಾ ಕೇಂದ್ರದ ಬಗ್ಗೆಯೋ ಅಂತ ಗೊಂದಲಕ್ಕೆ ಬೀಳುತ್ತಾರೆ. ಯಾಕೆಂದರೆ ಅವರು ಇದಕ್ಕಿದ್ದಂತೆ ಸಂಸ್ತತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಾರಂಭಿಸುತ್ತಾರೆ ಮತ್ತು ಅವರು ಮಾಡಿದ ಭಾರತ್ ಜೋಡೋ ಯಾತ್ರೆಯ ಗುಣಗಾನ ಮಾಡುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರಿಗೂ ತಬ್ಬಿಬ್ಬು!
ಬೆಂಗಳೂರು: ವಿರೋಧ ಪಕ್ಷ ನಾಯಕ ಆರ್ ಅಶೋಕರ ಕಾರ್ಯವೈಖರಿ ಮತ್ತು ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗುರವಾಗುತ್ತಿರುವ ಮತ್ತು ಅವರ ವಿರುದ್ಧ ಪಕ್ಷದವರೇ ಅಪಸ್ವರ ಎತ್ತುತ್ತಿರುವ ಸಂಗತಿ ಹೊಸದೇನಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಅವರನ್ನು ಕೆಳಗಿಳಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಧುರೀಣೆ ತೇಜಸ್ವಿನಿ ಗೌಡ ಇಂದು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದರು. ಅಶೋಕ ವಿಚಾರ ಹಾಗಿರಲಿ, ಪ್ರತಿಪಕ್ಷದ ಐಡೆಂಟಿಟಿ ಏನು ಅನ್ನೋದು ಜನಕ್ಕೆ ಗೊತ್ತಾಗಬೇಕಿದೆ, ನಮ್ಮ ರಾಜ್ಯದಲ್ಲಿರೋದು ಪ್ರತಿಪಕ್ಷ ಯಾವುದು? ಜೆಡಿಎಸ್ ನೇತೃತ್ವದ ಬಿಜೆಪಿಯಾ ಅಥವಾ ಬಿಜೆಪಿ ನೇತೃತ್ವದ ಬಿಜೆಪಿಯಾ ಎಂದು ತೇಜಸ್ವಿನಿ ಪ್ರಶ್ನಿಸಿದರು. ಹಿಂದೆ ಕಾಂಗ್ರೆಸ್ ಪ್ರತಿಪಕ್ಷವಾಗಿದ್ದಾಗ ತಮ್ಮ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದರೆನ್ನುವುದನ್ನು ಬಿಜೆಪಿ ಮೊದಲು ಅರಿಯಲಿ. ವಿರೋಧ ಪಕ್ಷದಲ್ಲಿದ್ದಾಗ ನಮ್ಮ ನಾಯಕರು ಜೈಲಿಗೂ ಹೋಗಿಬಂದರು. ಅಸಲಿಗೆ ಈಗಿರುವ ವಿರೋಧ ಪಕ್ಷದ ನಾಯಕನಿಗೆ ಕುರ್ಚಿಯ ವ್ಯಾಮೋಹ ಜಾಸ್ತಿ. ಅವರಿಗೆ ತಮ್ಮ ಜವಾಬ್ದಾರಿಯ ಅರಿವಿಲ್ಲ. ಅಸಲಿಗೆ ಬಿಜೆಪಿ ನಾಯಕರು ವಿಧಾನಸಭೆಯ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಒಬ್ಬ ಯೋಗ್ಯ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ತೇಜಸ್ವಿನಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ