ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ

Edited By:

Updated on: Sep 25, 2026 | 6:23 PM

ಕೊಡಗು ಜಿಲ್ಲೆಯಾದ್ಯಂತ ಗಾಢ ಕೆಂಪು ಬಣ್ಣದ ಮಳೆ ಸುರಿದಿದ್ದು, ವಿರಾಜಪೇಟೆ, ಮಡಿಕೇರಿ ತಾಲ್ಲೂಕುಗಳಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ವಿಚಿತ್ರ ವಿದ್ಯಮಾನದಿಂದ ಜನರು ಬೆಚ್ಚಿಬಿದ್ದಿದ್ದು, ಮಳೆನೀರಿನ ಬಣ್ಣಕ್ಕೆ ಕಾರಣವೇನೆಂದು ತಿಳಿಯಲು ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿನ್ನೆ ಸಂಜೆಯಿಂದ ಆರಂಭವಾದ ಈ ಮಳೆ ಪ್ರಾದೇಶಿಕ ನಿವಾಸಿಗಳಲ್ಲಿ ಕುತೂಹಲ ಕೆರಳಿಸಿದೆ.

ಕೊಡಗು, ಸೆಪ್ಟೆಂಬರ್​​​ 25: ಕೊಡಗು ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಜಿಟಿಪಿಟಿ ಮಳೆಯಾಗುತ್ತಿದ್ದು, ಇದರ ನಡುವೆ ವಿರಾಜಪೇಟೆ ತಾಲ್ಲೂಕಿನ ಕುಕನೂರು, ಬಿಟ್ಟಂಗಾಲ ಹಾಗೂ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಮರಗೋಡು ಸೇರಿದಂತೆ ಹಲವೆಡೆ ಗಾಢ ಕೆಂಪು ಬಣ್ಣದ ಮಳೆ ಸುರಿದಿದೆ. ಮಳೆ ನೀರಿನ ಈ ವಿಚಿತ್ರ ಬಣ್ಣ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದ್ದು, ಈ ಕೆಂಬಣ್ಣದ ಮಳೆನೀರನ್ನು ಕೂಡಲೇ ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಗೋಪಾಲ್​ ಸೋಮಯ್ಯ