ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಎಂದು ಹೇಳಿದ್ದೆ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ನುಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 26, 2024 | 9:29 PM

ತಿರುಪತಿ ಲಡ್ಡುನಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ವಿಚಾರ ಹೊರಬರ್ತಿದ್ದಂತೆ ಭಾರಿ ಸಂಚಲನ ಎದ್ದಿತ್ತು. ಕೋಟ್ಯಂತರ ಭಕ್ತರಲ್ಲಿ ಆತಂಕ ಮೂಡಿತ್ತು. ಈ ವಿಚಾರವಾಗಿ ಧಾರವಾಡದಲ್ಲಿ ಕೋಡಿಶ್ರೀ ಮಾತನಾಡಿದ್ದು, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ ಆದರೆ ತಿಂದವರ ಹೊಟ್ಟೆ ಏನು ಮಾಡುವವರು ಈಗ ಎಂದಿದ್ದಾರೆ.

ಧಾರವಾಡ, ಸೆಪ್ಟೆಂಬರ್​ 26: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿರೋ ಆರೋಪ ರಾಷ್ಟ್ರದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸದ್ಯ ಈ ವಿಚಾರವಾಗಿ ನಗರದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodishree) ಪ್ರತಿಕ್ರಿಯಿಸಿದ್ದು, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರ, ಆದರೆ ತಿಂದವರ ಹೊಟ್ಟೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು. ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಅಂತಾ ಹೇಳಿದ್ದೆ, ಈಗ ಅದೇ ನಡೆಯುತ್ತಿದೆ ಎಂದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.