ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು

Updated on: Jan 01, 2026 | 5:40 PM

ಕೋಗಿಲು ಲೇಔಟ್‌ನಲ್ಲಿ ಮನೆ ಹಂಚಿಕೆ ಕುರಿತು ಸಚಿವ ಜಮೀರ್ ಖಾನ್ ಖಡಾಖಂಡಿತ ಹೇಳಿಕೆ ನೀಡಿದ್ದಾರೆ. 257 ಮನೆಗಳ ಪೈಕಿ ಕರ್ನಾಟಕ ನಿವಾಸಿಗಳಿಗೆ, ಸೂಕ್ತ ದಾಖಲೆಗಳನ್ನು ಹೊಂದಿರುವ ಸ್ಥಳೀಯರಿಗೆ ಮಾತ್ರ ಮನೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶಿಯರಿಗೆ ಮನೆ ನೀಡುವ ಪ್ರಶ್ನೆಯೇ ಇಲ್ಲ ಎಂದಿರುವ ಜಮೀರ್, ವಿರೋಧ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು, ಜನವರಿ 01: ಕರ್ನಾಟಕದವರಲ್ಲದೆ ಹೊರಗಿನವರಿಗೆ ಹೇಗೆ ಮನೆ ಕೊಡಲು ಸಾಧ್ಯ? ಬಾಂಗ್ಲಾದೇಶದವರು ಹೇಗೆ ಬೆಂಗಳೂರಿನಲ್ಲಿ ಇರಲು ಸಾಧ್ಯ? ಹಾಗೇನಾದ್ರೂ ಅವರು ಬಾಂಗ್ಲಾದೇಶದವರಾಗಿದ್ದರೆ ಸಾಬೀತುಪಡಿಸಲಿ. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ಗೆ ವಸತಿ ಸಚಿವ ಜಮೀರ್​​ ತಿರುಗೇಟು ನೀಡಿದ್ದಾರೆ. ಕರ್ನಾಟಕದವರನ್ನು ಬಿಟ್ಟು ಹೊರಗಿನವರಿಗೆ ಮನೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.