AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಮೊದಲ ದಿನದಂದೇ ಸ್ಫೋಟಕ ಶತಕ ಸಿಡಿಸಿದ ಮಿಚೆಲ್ ಮಾರ್ಷ್

ವರ್ಷದ ಮೊದಲ ದಿನದಂದೇ ಸ್ಫೋಟಕ ಶತಕ ಸಿಡಿಸಿದ ಮಿಚೆಲ್ ಮಾರ್ಷ್

ಪೃಥ್ವಿಶಂಕರ
|

Updated on: Jan 01, 2026 | 5:25 PM

Share

Mitchell Marsh's BBL Century: ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್ ಬಿಬಿಎಲ್ 2025-26 ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. 2026ರ ಟಿ20 ವಿಶ್ವಕಪ್ ತಂಡ ಪ್ರಕಟಗೊಂಡ ಕೆಲವೇ ಗಂಟೆಗಳ ನಂತರ ಬಂದ ಈ ಸ್ಫೋಟಕ 102 ರನ್, ಪರ್ತ್ ಸ್ಕಾರ್ಚರ್ಸ್ ತಂಡಕ್ಕೆ 40 ರನ್‌ಗಳ ಜಯ ತಂದುಕೊಟ್ಟಿತು. ಕೇವಲ 58 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಮಾರ್ಷ್ ಅಬ್ಬರಿಸಿದರು.

ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್ 2025-26ರ ಬಿಗ್ ಬ್ಯಾಷ್ ಲೀಗ್​ನ 19 ನೇ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಜನವರಿ 1, 2026 ರಂದು ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾರ್ಚರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಿತು. 2026 ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಘೋಷಿಸಿದ ಕೆಲವು ಗಂಟೆಗಳ ನಂತರ ಮಿಚೆಲ್ ಮಾರ್ಷ್ ಈ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್ ಕೇವಲ 58 ಎಸೆತಗಳಲ್ಲಿ 102 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಕೇವಲ 55 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ ಮಾರ್ಷ್​ಗೆ ಇದು ಬಿಬಿಎಲ್ ವೃತ್ತಿಜೀವನದ ಎರಡನೇ ಶತಕವಾಗಿದೆ.

ಈ ಪಂದ್ಯದಲ್ಲಿ, ಮಿಚೆಲ್ ಮಾರ್ಷ್ ಹೊರತುಪಡಿಸಿ, ಆರನ್ ಹಾರ್ಡಿ ಕೂಡ ಪರ್ತ್ ಸ್ಕಾರ್ಚರ್ಸ್ ಪರ ಅದ್ಭುತ ಇನ್ನಿಂಗ್ಸ್ ಆಡಿದರು. ಆರನ್ ಹಾರ್ಡಿ 43 ಎಸೆತಗಳಲ್ಲಿ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್ ಒಂಬತ್ತು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಈ ಗುರಿ ಬೆನ್ನಟ್ಟಿದ ಹೋಬಾರ್ಟ್ ಹರಿಕೇನ್ಸ್ 189 ರನ್ ಕಲೆಹಾಕಲಷ್ಟೇ ಶಕ್ತವಾಗಿ 40 ರನ್​ಗಳಿಂದ ಸೊಲೊಪ್ಪಿಕೊಂಡಿತು.